
ನೆಲಮಂಗಲ: ಸಮೀಪದ ಕನ್ನಮಂಗಲ ಗೇಟ್ ಬಳಿಯ ಅಮ್ಮನಗುಡ್ಡದಲ್ಲಿ ಆದಿಶಕ್ತಿ ವಿಶ್ವರೂಪದ 27 ಅಡಿ ಎತ್ತರದ ಏಕಶಿಲಾ ವಿಗ್ರಹದ ಪ್ರತಿಷ್ಠಾಪನಾ ಮಹೋತ್ಸವ ಶುಕ್ರವಾರ ನೆರವೇರಿತು.
ಮಹೋತ್ಸವದಲ್ಲಿ ಧರ್ಮಗುರುಗಳು, ರಾಜಕೀಯ ಮುಖಂಡರು ಭಾಗವಹಿಸಿದ್ದರು. ದೇವಿ ಉಪಾಸಕರು ಸಂಸ್ಥಾಪಕ ನರಸಿಂಹಮೂರ್ತಿ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಆಚರಣೆಗಳನ್ನು ಆಗಮಿಕ ಅಶ್ವತ್ಥನಾರಾಯಣ ನೆರವೇರಿಸಿದರು.
27 ಅಡಿ ಎತ್ತರದ ಕೃಷ್ಣಶಿಲೆಯ ದೇವಿ ವಿಶ್ವರೂಪದ ವಿಗ್ರಹದಲ್ಲಿ ತ್ರಿಮೂರ್ತಿಗಳ ಜನ್ಮದಾತೆಯ ದಶಾವತಾರಗಳನ್ನು ಬಿಡಿಸಲಾಗಿದೆ. ಆರು ಅಡಿ ಪೀಠಭಾಗದಲ್ಲಿ ಮೂರು ಹಂತದ ಪೀಠ ಸ್ಥಾಪಿಸಿ, ಲಿಖಿತನಾಮ ಜಪ ಮತ್ತು ಪ್ರತಿಷ್ಠಾಪನೆಗೂ ಮುನ್ನ ಪೀಠದ ಕೆಳಗೆ ಸಾಲಿಗ್ರಾಮ ಶಿಲೆಗಳನ್ನು ಭಕ್ತರು ಹಾಕಿ ಧನ್ಯತೆ ಪಡೆದರು. ಶನಿವಾರ ಗಿರಿಜಾ ಕಲ್ಯಾಣೋತ್ಸವ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.