ADVERTISEMENT

ಬಿಇಎಲ್‌ ಸಂಸ್ಥೆಯ ಯುದ್ಧೋಪಕರಣ ಪ್ರದರ್ಶನ

ಏರೊ ಇಂಡಿಯಾ 2019

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2019, 19:54 IST
Last Updated 13 ಫೆಬ್ರುವರಿ 2019, 19:54 IST
ಬಿಇಎಲ್‌ ಅಭಿವೃದ್ಧಿಪಡಿಸಿದ ರಾಡಾರ್‌
ಬಿಇಎಲ್‌ ಅಭಿವೃದ್ಧಿಪಡಿಸಿದ ರಾಡಾರ್‌   

ಬೆಂಗಳೂರು: ಭಾರತ್‌ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ (ಬಿಇಎಲ್‌) ಸಂಸ್ಥೆಯು ಅಭಿವೃದ್ಧಿಪಡಿಸಿದ ಅನೇಕ ಯುದ್ಧೋಪಕರಣಗಳು ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಪ್ರದರ್ಶನಗೊಳ್ಳಲಿವೆ.

ಇದೇ 20ರಿಂದ ಯಲಹಂಕ ವಾಯುನೆಲೆಯಲ್ಲಿ ನಡೆಯುವ ಈ ದ್ವೈವಾರ್ಷಿಕ ಮೇಳದಲ್ಲಿ ಬಿಇಎಲ್‌ ಅಭಿವೃದ್ಧಿಪಡಿಸಿದ ಸೇನಾ ಸಂವಹನ ಸಲಕರಣೆಗಳು, ರಾಡಾರ್‌ ವ್ಯವಸ್ಥೆ, ಕ್ಷಿಪಣಿಗಳು, ನೌಕಾಪಡೆಯ ಉಪಕರಣಗಳು, ಎಲೆಕ್ಟ್ರಾನಿಕ್ಸ್‌ ಶಸ್ತ್ರಾಸ್ತ್ರಗಳು, ಆ್ಯಂಟಿ ಸಬ್‌ಮೆರೀನ್‌ ಶಸ್ತ್ರಾಸ್ತ್ರಗಳು, ಟ್ಯಾಂಕರ್‌ಗಳಲ್ಲಿ ಬಳಸುವ ಎಲೆಕ್ಟ್ರಾನಿಕ್ಸ್‌ ವ್ಯವಸ್ಥೆ, ಸುಧಾರಿತ ತಂತ್ರಜ್ಞಾನದ ಬಂದೂಕು, ಮಾನವರಹಿತ ಯುದ್ಧೋಪಕರಣಗಳು, ಸೈಬರ್‌ ಭದ್ರತೆ ಹಾಗೂ ವೃತ್ತಿಪರ ಎಲೆಕ್ಟ್ರಾನಿಕ್‌ ಪರಿಕರಗಳು ಪ್ರದರ್ಶನಗೊಳ್ಳಲಿವೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಕ್ಷಿಪಣಿಗಳ ಬಗ್ಗೆ ಕ್ಷಿಪ್ರ ಸುಳಿವು ನೀಡುವ ರಾಡಾರ್‌ ಸೇರಿದಂತೆ ಅತ್ಯಾಧುನಿಕ ರಾಡಾರ್‌ಗಳನ್ನು ಈ ಮೇಳದ ಬಿಇಎಲ್‌ ಪ್ರದರ್ಶನ ಮಳಿಗೆಗಳಲ್ಲಿ ಕಾಣಬಹುದು. ಲಘು ಯುದ್ಧ ವಿಮಾನ, ನಮ್ಮ ದೇಶದ ವಿಮಾನ ಹಾಗೂ ಶತ್ರುಗಳ ಯುದ್ಧವಿಮಾನ, ಹೆಲಿಕಾಪ್ಟರ್‌
ಗಳನ್ನು ಪತ್ತೆ ಹಚ್ಚುವ ವ್ಯವಸ್ಥೆ, ಡ್ರೋನ್‌ ವ್ಯವಸ್ಥೆಗಳೂ ವೀಕ್ಷಣೆಗೆ ಲಭ್ಯ ಎಂದು ಸಂಸ್ಥೆಯ ಹಿರಿಯ ಉಸಪ ಪ್ರಧಾನ ವ್ಯವಸ್ಥಾಪಕ ಆಶಿಸ್‌ ಕನ್ಸಾಲ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.