ಬೆಂಗಳೂರು: ಜಂಟಿ ಡಾಕ್ಟರೇಟ್ ಪ್ರೋಗ್ರಾಂಗಾಗಿ ಎಂ.ಎಸ್. ರಾಮಯ್ಯ ಆನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯವು (ಆರ್‌ಯುಎಎಸ್) ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್‌ನೊಂದಿಗೆ (ಎನ್‌ಐಎಎಸ್) ಒಡಂಬಡಿಕೆ ಮಾಡಿಕೊಂಡಿದೆ.
ಇದು ಐತಿಹಾಸಿಕ ಸಹಯೋಗ. ಸಮಾಜ ವಿಜ್ಞಾನ, ರಾಷ್ಟ್ರೀಯ ಭದ್ರತೆ, ನೀತಿ ಮತ್ತು ಸುಸ್ಥಿರತೆ ಸಂಶೋಧನಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮಾಡಿಕೊಂಡಿರುವ ಒಪ್ಪಂದ ಇದಾಗಿದೆ. ಎನ್ಐಎಎಸ್ ವಿದ್ಯಾರ್ಥಿಗಳ ಪಿಎಚ್.ಡಿ ನೋಂದಣಿ ಮಾಡಲಿದೆ ಮತ್ತು ಅವರಿಗೆ ಡಾಕ್ಟರೇಟ್ ಪದವಿಯನ್ನು ಎಂಎಸ್ ಆರ್‌ಯುಎಎಸ್‌ನಿಂದ ನೀಡಲಾಗುತ್ತದೆ. ಎನ್‌ಐಎಎಸ್‌ನಲ್ಲಿರುವ ಉನ್ನತ ಬೋಧಕ ಸಿಬ್ಬಂದಿ ಆರ್‌ಯುಎಎಸ್‌ನಲ್ಲಿಯೂ ವಿವಿಧ ವಿಭಾಗಗಳಲ್ಲಿ ಬೋಧನೆ ಮಾಡಲಿದ್ದಾರೆ. ಇದು ವಿದ್ಯಾರ್ಥಿಗಳ ಜ್ಞಾನ ವಿಸ್ತರಣೆಗೆ ಅನುಕೂಲ ಆಗಲಿದೆ ಎಂದು ಆರ್‌ಯುಎಎಸ್ ತಿಳಿಸಿದೆ.
ಸಂಶೋಧನಾರ್ಥಿಗಳು ಅಡ್ವಾನ್ಸ್ ಹೆಲ್ತ್ ಸೈನ್ಸಸ್ ರೀಸರ್ಚ್, ಇಂಧನ, ಎಐ ಹಾಗೂ ಮಷಿನ್ ಲರ್ನಿಂಗ್, ಹವಾಮಾನ ಬದಲಾವಣೆ ಮತ್ತಿತರ ಕ್ಷೇತ್ರಗಳಲ್ಲಿ ಸಂಪನ್ಮೂಲ ಬಳಕೆ, ಸಂಶೋಧನಾ ಪರಿಸರ ವ್ಯವಸ್ಥೆಯು ಆರ್‌ಯುಎಎಸ್ ಕ್ಯಾಂಪಸ್‌ನಲ್ಲಿ ದೊರೆಯಲಿದೆ ಎಂದು ಹೇಳಿದೆ.
ಎನ್‌ಐಎಎಸ್ ನಿರ್ದೇಶಕ ಶೈಲೇಶ್ ನಾಯಕ್ ಮತ್ತು ಆರ್‌ಯುಎಎಸ್ ಕುಲಪತಿ ಕುಲ್ಲೀಪ್ ಕುಮಾರ್ ರೈನಾ ಒಡಂಬಡಿಕೆಗೆ ಸಹಿ ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.