ADVERTISEMENT

ಸಾರ್ವತ್ರಿಕ ಮುಷ್ಕರಕ್ಕೆ ಎಐಎಸ್‌ಇಸಿ ಬೆಂಬಲ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 20:28 IST
Last Updated 24 ನವೆಂಬರ್ 2020, 20:28 IST

ಬೆಂಗಳೂರು: ರೈತ ಹಾಗೂ ಕಾರ್ಮಿಕ ಸಂಘಟನೆಗಳು ಇದೇ 26ರಂದು ದೇಶದಾದ್ಯಂತ ನಡೆಸುತ್ತಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯು (ಎಐಎಸ್ಇಸಿ) ಬೆಂಬಲ ಸೂಚಿಸಿದೆ.

‘ಜನವಿರೋಧಿ, ಶಿಕ್ಷಣ ವಿರೋಧಿ ಯಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ–2020 ಅನ್ನು ರದ್ದುಪಡಿಸಬೇಕು’ ಎಂದು ಸಮಿತಿಯು ಒತ್ತಾಯಿಸಿದೆ.

ಪ್ರಸಾರ ಭಾರತಿಯ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜವಾ ಹರ್ ಸರ್ಕಾರ್, ಪಶ್ಚಿಮ ಬಂಗಾಳದ ವಕೀಲ ಬಿಮಲ್ ಚಟರ್ಜಿ, ಸಾಹಿತಿ ಡಾ.ಕೆ. ಮರುಳಸಿದ್ದಪ್ಪ, ಶಿಕ್ಷಣ ತಜ್ಞರಾದ ಪ್ರೊ.ಅಲ್ಲಮಪ್ರಭು ಬೆಟ್ಟದೂರು, ಡಾ.ಎಲ್. ಜವಾಹರ್ ನೇಸನ್, ಪ್ರೊ.ಮಹಾಬಲೇಶ್ವರ ರಾವ್, ಗಣಿತತಜ್ಞ ಡಾ.ಎಸ್. ಬಾಲ ಚಂದ್ರ ರಾವ್, ನಿವೃತ್ತ ಪ್ರಾಧ್ಯಾಪಕರಾದರಾಜೇಂದ್ರ ಚೆನ್ನಿ, ಪುರುಷೋತ್ತಮ ಬಿಳಿಮಲೆ, ಚಂದ್ರ ಪೂಜಾರಿ, ಪ್ರೊ.ಜಿ.ಕೆ. ಗೋವಿಂದ ರಾವ್, ಕಾಶೀನಾಥ ಅಂಬಲಗೆ, ಕೆ.ಸಿ. ರಘು ಹಾಗೂ ಮಕ್ಕಳ ತಜ್ಞಡಾ. ಯೋಗಾನಂದ ರೆಡ್ಡಿ ಅವರು ಶಿಕ್ಷಣ ನೀತಿ ರದ್ದತಿಗೆ ಬೆಂಬಲ ಸೂಚಿಸಿದ್ದಾರೆ ಎಂದು ಸಮಿತಿ ಸದಸ್ಯ ಆರ್.ಕೆ. ವೀರಭದ್ರಪ್ಪಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.