ADVERTISEMENT

‘ಅಂಬಿ ನಮನ’ದಿಂದ ಅಂಗವಿಕಲರಿಗೆ ನೆರವು

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2019, 19:01 IST
Last Updated 14 ಫೆಬ್ರುವರಿ 2019, 19:01 IST
ಅಂಬಿ ನಮನ
ಅಂಬಿ ನಮನ   

ಬೆಂಗಳೂರು: ಸಮರ್ಥನಂ ಅಂಗವಿಕಲರ ಸಂಸ್ಥೆಯು ದಿವಂಗತ ನಟ ಅಂಬರೀಷ್ ಅವರ ಸ್ಮರಣಾರ್ಥ ‘ಅಂಬಿ ನಮನ’ ಕಾರ್ಯಕ್ರಮವನ್ನು ಬಸವನಗುಡಿಯ ನ್ಯಾಷನಲ್‌ ಕಾಲೇಜು ಮೈದಾನದಲ್ಲಿಮಾರ್ಚ್‌ 3ರಂದು ಹಮ್ಮಿಕೊಂಡಿದೆ.

ಸಂಜೆ 5.30ಕ್ಕೆ ಆರಂಭಗೊಳ್ಳುವ ಈ ವಿಶೇಷ ರಸಮಂಜರಿ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರಾದ ಎಸ್‌.ಪಿ.ಬಾಲಸುಬ್ರಹ್ಮಣ್ಯ, ಗುರುಕಿರಣ್‌, ರಾಜೇಶ್‌ ಕೃಷ್ಣನ್‌, ಅರ್ಜುನ್‌ ಜನ್ಯ, ಮಂಜುಳಾ ಗುರುರಾಜ್‌, ಅರ್ಚನಾ ಉಡುಪ, ಅನುರಾಧಾ ಭಟ್‌ ಅವರು ಗಾನಸುಧೆ ಹರಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಸುಮಲತಾ ಅಂಬರೀಷ್‌, ಚಿತ್ರರಂಗದ ನಟ–ನಟಿಯರು, ನಿರ್ಮಾಪಕರು, ನಿರ್ದೇಶಕರು ಮತ್ತು ತಂತ್ರಜ್ಞರು ಭಾಗವಹಿಸಲಿದ್ದಾರೆ. ಹಿರಿಯ ನಟರಾದ ಶಿವರಾಂ ಅವರಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ಜರುಗಲಿದೆ.

ಈ ಕಾರ್ಯಕ್ರಮದಿಂದ ಸಂಗ್ರಹವಾಗುವ ಮೊತ್ತವನ್ನು ಸಮರ್ಥನಂ ಸಂಸ್ಥೆಯು ಅಂಗವಿಕಲರಿಗಾಗಿ ಜೆ.ಪಿ.ನಗರದಲ್ಲಿ ನಿರ್ಮಿಸುತ್ತಿರುವ ಕಟ್ಟಡಕ್ಕೆ ಬಳಸಿಕೊಳ್ಳಲಿದೆ. ಈ ಕಟ್ಟಡದ ಒಂದು ಭಾಗಕ್ಕೆ ಅಂಬರೀಷ್‌ ಹೆಸರು ಇಡಲು ನಿರ್ಧರಿಸಲಾಗಿದೆ. ಅಂಬಿಗೆ ನಮನ ಸಲ್ಲಿಸುತ್ತ, ಅಂಗವಿಕಲರ ಬಾಳಿಗೆ ನೆರವಾಗಲು ಸಂಸ್ಥೆಯು ಪ್ರಕಟಣೆಯಲ್ಲಿ ಮನವಿ ಮಾಡಿದೆ.

ADVERTISEMENT

ಸಂಪರ್ಕ: 9686927288

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.