ADVERTISEMENT

ಬೆಂಗಳೂರು: ಶಾಂತಕುಮಾರಿ, ಆರ್. ಗಣೇಶ್‌ಗೆ ‘ಅ.ನ.ಕೃ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 14:15 IST
Last Updated 10 ಅಕ್ಟೋಬರ್ 2025, 14:15 IST
ಎಲ್.ವಿ. ಶಾಂತಕುಮಾರಿ
ಎಲ್.ವಿ. ಶಾಂತಕುಮಾರಿ   

ಬೆಂಗಳೂರು: ಅನಕೃ ಪ್ರತಿಷ್ಠಾನ ನೀಡುವ ‘ಅನಕೃ ಪ್ರಶಸ್ತಿ’ಗೆ ಲೇಖಕಿ ಎಲ್.ವಿ. ಶಾಂತಕುಮಾರಿ ಹಾಗೂ ವಿದ್ವಾಂಸ ಆರ್. ಗಣೇಶ್ ಆಯ್ಕೆಯಾಗಿದ್ದಾರೆ. 

2024 ಮತ್ತು 2025ನೇ ಸಾಲಿನ ಪ್ರಶಸ್ತಿಯನ್ನು ಪ್ರತಿಷ್ಠಾನ ಪ್ರಕಟಿಸಿದೆ. ಈ ಪ‍್ರಶಸ್ತಿಯು ತಲಾ ₹50 ಸಾವಿರ ನಗದು ಒಳಗೊಂಡಿದೆ.   

ಬೆಂಗಳೂರಿನ ಕೆಂಪೇಗೌಡನಗರದಲ್ಲಿರುವ ಕೇಶವಶಿಲ್ಪ ಸಭಾಂಗಣದಲ್ಲಿ ನವೆಂಬರ್ 9ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಸಾಹಿತಿ ಎಸ್.ಆರ್. ರಾಮಸ್ವಾಮಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರತಿಷ್ಠಾನದ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಅಧ್ಯಕ್ಷತೆ ವಹಿಸುತ್ತಾರೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಗೌತಮ್ ಎ.ಕೆ. ತಿಳಿಸಿದ್ದಾರೆ. 

ADVERTISEMENT
 ಆರ್. ಗಣೇಶ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.