ADVERTISEMENT

ಕುಂಬ್ಳೆ ವೃತ್ತದಲ್ಲಿ ಅಳವಡಿಕೆಯಾಗದ ಫಲಕ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 2:28 IST
Last Updated 12 ಅಕ್ಟೋಬರ್ 2021, 2:28 IST
ಕಂಬಕ್ಕೆ ಒರಗಿಸಿ ನಿಲ್ಲಿಸಿರುವ ಫಲಕ –ಪ್ರಜಾವಾಣಿ ಚಿತ್ರ
ಕಂಬಕ್ಕೆ ಒರಗಿಸಿ ನಿಲ್ಲಿಸಿರುವ ಫಲಕ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಎಂ.ಜಿ. ರಸ್ತೆಯಲ್ಲಿನ ಅನಿಲ್‌ ಕುಂಬ್ಳೆ ವೃತ್ತದಲ್ಲಿ ಕುಂಬ್ಳೆ ಅವರ ಹೆಸರಿನಲ್ಲಿ ಇದ್ದ ಫಲಕ ಕಿತ್ತು ಹಲವು ತಿಂಗಳುಗಳೇ ಕಳೆದಿದ್ದು, ಅದನ್ನು ಮತ್ತೆ ಅಳವಡಿಸಲು ಬಿಬಿಎಂಪಿಗೆ ಇನ್ನೂ ಕಾಲ ಕೂಡಿ ಬಂದಿಲ್ಲ.

ಪಾದಚಾರಿ ಮಾರ್ಗ ಅಭಿವೃದ್ಧಿಪಡಿಸುವ ನೆಪದಲ್ಲಿ ಫಲಕ ತೆಗೆದು ಕಂಬವೊಂದಕ್ಕೆ ಒರಗಿಸಲಾಗಿದೆ. ಕಾಮಗಾರಿ ಮುಗಿದು ಹಲವು ತಿಂಗಳುಗಳೇ ಕಳೆದರೂ ಫಲಕ ಮಾತ್ರ ಅಲ್ಲೇ ಇದೆ. ಬೆಂಗಳೂರಿನವರೇ ಆದ ಅನಿಲ್‌ ಕುಂಬ್ಳೆ 1990ರ ಏಪ್ರಿಲ್‌ 25ರಂದು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ದೆಹಲಿಯಲ್ಲಿ 1999ರಲ್ಲಿ ನಡೆದಿದ್ದಪಾಕಿಸ್ತಾನದ ವಿರುದ್ಧದ ಟೆಸ್ಟ್‌ ಇನಿಂಗ್ಸ್‌ನಲ್ಲಿ ಎಲ್ಲ ಹತ್ತು ವಿಕೆಟ್‌ಗಳನ್ನು ಪಡೆದು ಸಾಧನೆ ಮಾಡಿದರು. ಇದರ ನೆನಪಿಗಾಗಿ ಎಂ.ಜಿ. ರಸ್ತೆಯಲ್ಲಿನ ವೃತ್ತಕ್ಕೆ ಅನಿಲ್‌ ಕುಂಬ್ಳೆ ವೃತ್ತ ಎಂದು ನಾಮಕರಣ ಮಾಡಿ ಫಲಕ ಅಳವಡಿಸಲಾಗಿತ್ತು.

ಕುಂಬ್ಳೆ ಅವರು ಬಿಜೆಪಿ ಪರ ಒಲವು ಹೊಂದಿದ್ದಾರೆ ಎಂದು ಭಾವಿಸಿರುವ ಸ್ಥಳೀಯ ಜನಪ್ರತಿನಿಧಿಯೊಬ್ಬರು ಫಲಕ ಅಳವಡಿಕೆಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಆರೋಪ ಇದೆ. ರಾಜಕೀಯ ಕಾರಣಕ್ಕೆ ಕ್ರಿಕೆಟ್ ಆಟಗಾರರ ಹೆಸರಿನ ಫಲಕ ಅಳವಡಿಸದೆ ಅವಮಾನ ಮಾಡಬಾರದು ಎಂಬುದು ಕ್ರಿಕೆಟ್ ಪ್ರಿಯರ ಅಭಿಪ್ರಾಯ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.