ಬೆಂಗಳೂರು: ರಾಜ್ಯದ ಪೊಲೀಸ್ ಠಾಣೆಗಳಲ್ಲಿ ನಾರ್ಕೋಟಿಕ್ಸ್ ಸಂಬಂಧ ದಾಖಲಾಗುವ ಪ್ರಕರಣಗಳ ಮೇಲ್ವಿಚಾರಣೆಗಾಗಿ ಮಾದಕ ವಸ್ತುಗಳ ವಿರೋಧಿ ಕಾರ್ಯಪಡೆಯನ್ನು ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.
ಈ ಕಾರ್ಯಪಡೆಯು ಡಿಜಿ– ಐಜಿಪಿ ಅವರ ನಿಗಾದಲ್ಲಿ ಕೆಲಸ ಮಾಡಲಿದೆ. ಅಲ್ಲದೆ, ಈ ಕಾರ್ಯಪಡೆಯು ತನ್ನ ವರದಿಯನ್ನು ಸೈಬರ್ ಕಮಾಂಡ್ ಡಿಜಿ ಅವರಿಗೆ ನೀಡಬೇಕು ಎಂದು ಸೂಚಿಸಲಾಗಿದೆ.
ಕಾರ್ಯಪಡೆಯ ಸಮರ್ಪಕ ಕಾರ್ಯನಿರ್ವಹಣೆಗಾಗಿ 10 ಹುದ್ದೆಗಳನ್ನು ಸೃಜಿಸಲಾಗುತ್ತದೆ. ಈ ಹುದ್ದೆಗಳ ಪೈಕಿ ಪೊಲೀಸ್ ಅಧೀಕ್ಷಕ, ಸಹಾಯಕ ಪೊಲೀಸ್ ಆಯುಕ್ತರ ತಲಾ ಒಂದು ಹುದ್ದೆ, ಸಹಾಯಕ ಆಡಳಿತಾಧಿಕಾರಿ, ಶಾಖಾ ಅಧೀಕ್ಷಕ, ಕಿರಿಯ ಸಹಾಯಕ, ಪ್ರಥಮ ದರ್ಜೆ ಸಹಾಯಕ, ಶೀಘ್ರ ಲಿಪಿಗಾರ ಮತ್ತು ದಲಾಯತ್ ತಲಾ 1 ಹುದ್ದೆ ಸೃಜಿಸಲು ನಿರ್ದೇಶಿಸಲಾಗಿದೆ.
ಉಳಿದಂತೆ ನಕ್ಸಲ್ ನಿಗ್ರಹ ಪಡೆಯಿಂದ ಇಬ್ಬರು ಪೊಲೀಸ್ ಇನ್‌ಸ್ಪೆಕ್ಟರ್‌ಗಳು, ನಾಲ್ವರು ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಗಳು, 20 ಹೆಡ್ ಕಾನ್‌ಸ್ಟೆಬಲ್‌ಗಳು ಮತ್ತು 30 ಕಾನ್‌ಸ್ಟೆಬಲ್‌ಗಳನ್ನು ವರ್ಗಾಯಿಸಲು ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.