ADVERTISEMENT

ದುಪ್ಪಟ್ಟು ಲಾಭದ ಆಮಿಷ; ಆ್ಯಪ್‌ನಲ್ಲಿ ಹೂಡಿಕೆ ವಂಚನೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 20:22 IST
Last Updated 22 ಜುಲೈ 2021, 20:22 IST

ಬೆಂಗಳೂರು: ದುಪ್ಪಟ್ಟು ಲಾಭದ ಆಮಿಷವೊಡ್ಡಿ ಆ್ಯಪ್‌ ಮೂಲಕ ₹ 3 ಲಕ್ಷ ಹೂಡಿಕೆ ಮಾಡಿಸಿಕೊಂಡು ವಂಚಿಸಲಾಗಿದ್ದು, ಈ ಬಗ್ಗೆ ದಕ್ಷಿಣ ವಿಭಾಗ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಜೆ.ಪಿ.ನಗರ 6ನೇ ಹಂತದ 21 ವರ್ಷದ ಯುವತಿಯೊಬ್ಬರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಹೂಡಿಕೆ ಹಣದ ಮೇಲೆ ದುಪ್ಪಟ್ಟು ಲಾಭ ನೀಡುವುದಾಗಿ ‘ಶೋಫರ್’ ಹೆಸರಿನ ಆ್ಯಪ್‌ ಪ್ರತಿನಿಧಿಗಳು ತಿಳಿಸಿದ್ದರು. ಅದನ್ನು ನಂಬಿದ್ದ ಯುವತಿ ಹಾಗೂ ಅವರ ಸ್ನೇಹಿತರು, ₹ 3 ಲಕ್ಷ ಹೂಡಿಕೆ ಮಾಡಿದ್ದರು. ಅದಾದ ನಂತರ ಯಾವುದೇ ಲಾಭ ಆ್ಯಪ್‌ ಕಡೆಯಿಂದ ಬಂದಿಲ್ಲ. ಅಸಲು ಸಹ ವಾಪಸು ಕೊಟ್ಟಿಲ್ಲ.’

ADVERTISEMENT

‘ಆ್ಯಪ್ ವಂಚನೆ ಅರಿವಿಗೆ ಬರುತ್ತಿದ್ದಂತೆ ಯುವತಿ ದೂರು ನೀಡಿದ್ದಾರೆ. ಸದ್ಯ ₹ 3 ಲಕ್ಷ ಹೂಡಿಕೆ ದಾಖಲೆಗಳು ಸಿಕ್ಕಿವೆ. ಇದೇ ಆ್ಯಪ್‌ನಲ್ಲಿ ಹಲವರು ಹಣ ಹೂಡಿಕೆ ಮಾಡಿರುವ ಮಾಹಿತಿ ಇದೆ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.