ADVERTISEMENT

ಐಎಸ್‌ಎ ಸದಸ್ಯರಾಗಿ ರಮೇಶ್‌ ನೇಮಕ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2020, 16:46 IST
Last Updated 5 ಡಿಸೆಂಬರ್ 2020, 16:46 IST
ರಮೇಶ್‌ ಶಿವಣ್ಣ
ರಮೇಶ್‌ ಶಿವಣ್ಣ   

ಬೆಂಗಳೂರು: ಕರ್ನಾಟಕ ನವೀಕರಿಸಬಹುದಾದ ಇಂಧನಗಳ ಉತ್ಪಾದಕರ ಸಂಘದ ಅಧ್ಯಕ್ಷ ರಮೇಶ್‌ ಶಿವಣ್ಣ ಅವರು ಅಂತರರಾಷ್ಟ್ರೀಯ ಸೌರವಿದ್ಯುತ್‌ ಒಕ್ಕೂಟದ (ಐಎಸ್‌ಎ) ತಜ್ಞರ ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ಸೌರವಿದ್ಯುತ್‌ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ರಾಷ್ಟ್ರಗಳು ಸೇರಿಕೊಂಡು ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುವೆಲ್‌ ಮ್ಯಾಕ್ರಾನ್‌ ನೇತೃತ್ವದಲ್ಲಿ ಒಕ್ಕೂಟವನ್ನು ರಚಿಸಿಕೊಂಡಿವೆ. ಐಎಸ್‌ಎ ಕೇಂದ್ರ ಕಚೇರಿ ಗುರುಗ್ರಾಮದಲ್ಲಿದ್ದು, 121 ಸದಸ್ಯ ರಾಷ್ಟ್ರಗಳನ್ನು ಒಕ್ಕೂಟ ಒಳಗೊಂಡಿದೆ. ಉಪೇಂದ್ರ ತ್ರಿಪಾಠಿ ಐಎಸ್‌ಎಯ ಪ್ರಧಾನ ನಿರ್ದೇಶಕರಾಗಿದ್ದಾರೆ.

ಸೌರವಿದ್ಯುತ್‌ ಉತ್ಪಾದನೆ ಉತ್ತೇಜಿಸುವ ಮತ್ತು ಬಳಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಮಿತಿಯು ನೀತಿಗಳನ್ನು ರೂಪಿಸಲಿದೆ.

ADVERTISEMENT

ರಮೇಶ್‌ ಶಿವಣ್ಣ ಅವರು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆಗಳ ಒಕ್ಕೂಟದ (ಎಫ್‌ಕೆಸಿಸಿಐ) ನಿರ್ದೇಶಕರೂ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.