ADVERTISEMENT

ಕಲಾ ವಿನ್ಯಾಸಕ ವಿಠ್ಠಲ ರಾವ್‌ಗೆ ರಂಗ ಗೌರವ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 20:44 IST
Last Updated 30 ಜನವರಿ 2026, 20:44 IST
   

ಬೆಂಗಳೂರು: ತೊಟ್ಟವಾಡಿ ನಂಜುಂಡಸ್ವಾಮಿ ಗೆಳೆಯರ ಬಳಗ ನೀಡುವ 2025ನೇ ಸಾಲಿನ ‘ರಂಗ ಗೌರವ’ಕ್ಕೆ ಕಲಾ ವಿನ್ಯಾಸಕ ಹಾಗೂ ರಂಗ ಸಂಘಟಕ ಬಿ.ವಿಠ್ಠಲ ರಾವ್ (ಅಪ್ಪಯ್ಯ) ಆಯ್ಕೆಯಾಗಿದ್ದಾರೆ. 

ಈ ರಂಗ ಗೌರವವು ₹10 ಸಾವಿರ ನಗದು ಒಳಗೊಂಡಿದೆ. ನಾಟಕಕಾರ ಹಾಗೂ ರಂಗ ಸಂಘಟಕರಾಗಿ, ರಂಗಭೂಮಿಯ ಕಲಾವಿದರಿಗೆ ವೈದ್ಯಕೀಯ ನೆರವು ನೀಡುತ್ತಿದ್ದ ತೊಟ್ಟವಾಡಿ ನಂಜುಂಡಸ್ವಾಮಿ ಅವರ ಸ್ಮರಣಾರ್ಥ ಈ ರಂಗ ಗೌರವ ನೀಡಲಾಗುತ್ತಿದೆ. 

ಫೆಬ್ರುವರಿ11ರಂದು ಸಂಜೆ 5 ಗಂಟೆಗೆ ಕನ್ನಡ ಭವನದ ನಯನ ಸಭಾಂಗಣದಲ್ಲಿ ರಂಗ ಗೌರವ ಸನ್ಮಾನ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗಿದೆ ಎಂದು ತೊಟ್ಟವಾಡಿ ನಂಜುಂಡಸ್ವಾಮಿ ಗೆಳೆಯರ ಬಳಗದ
ಸಂಚಾಲಕ ಗುಂಡಣ್ಣ ಚಿಕ್ಕಮಗಳೂರು ಅವರು ತಿಳಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.