ಬೆಂಗಳೂರು: ಬಿಜೆಪಿ ಶಾಸಕ ಅರವಿಂದ ಬೆಲ್ಲದ ಕರೆ ಕದ್ದಾಲಿಕೆ ಪ್ರಕರಣದ ವಿಚಾರಣೆಯನ್ನು ಶೇಷಾದ್ರಿಪುರ ಉಪವಿಭಾಗದ ಎಸಿಪಿ ಎಂ.ಜೆ. ಪೃಥ್ವಿ ನೇತೃತ್ವದ ತಂಡ ಕೈಗೆತ್ತಿಕೊಂಡಿದ್ದು, ಗುರುವಾರ ಹಲವೆಡೆ ಸಂಚರಿಸಿ ಮಾಹಿತಿ ಕಲೆಹಾಕಿತು.
ಆರೋಪದ ಬಗ್ಗೆ ಕೆಲ ಪೂರಕ ಮಾಹಿತಿ ಒದಗಿಸುವಂತೆ ಅರವಿಂದ ಬೆಲ್ಲದ ಅವರಿಗೆ ತಂಡ ತಿಳಿಸಿತ್ತು. ಆದರೆ, ತಂಡದ ಎದುರು ಬೆಲ್ಲದ ಗುರುವಾರ ಹಾಜರಾಗಲಿಲ್ಲ. ಶುಕ್ರವಾರ ಹಾಜರಾಗುವ ಸಾಧ್ಯತೆ ಇದೆ.
‘ಅರವಿಂದ ಬೆಲ್ಲದ ನೀಡಿರುವ ದೂರಿನಲ್ಲಿರುವ ಸಂಗತಿಗಳಲ್ಲಿ ಕೆಲ ಗೊಂದಲಗಳು ಸೃಷ್ಟಿಯಾಗಿವೆ. ಈ ಬಗ್ಗೆ ಬೆಲ್ಲದ ಅವರ ಪ್ರತಿಕ್ರಿಯೆ ಪಡೆಯಬೇಕಾಗಿದೆ. ಸದ್ಯಕ್ಕೆ ಅವರು ಲಭ್ಯವಾಗಿಲ್ಲ’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.