ADVERTISEMENT

ಬೆಂಗಳೂರು: ಕಾರು ನಿಲುಗಡೆ ಪ್ರಶ್ನಿಸಿದ ವ್ಯಕ್ತಿಯ ಮೇಲೆ ಕೇರಳದವರಿಂದ ಹಲ್ಲೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 19:57 IST
Last Updated 24 ನವೆಂಬರ್ 2025, 19:57 IST
<div class="paragraphs"><p>ಹಲ್ಲೆ</p></div>

ಹಲ್ಲೆ

   

– ಗೆಟ್ಟಿ ಚಿತ್ರ

ಬೆಂಗಳೂರು: ಕಾರು ನಿಲುಗಡೆ ವಿಚಾರದ ಬಗ್ಗೆ ಪ್ರಶ್ನಿಸಿದ್ದಕ್ಕೆ ಖಾಸಗಿ ಕಂಪನಿ ಉದ್ಯೋಗಿ ಮೇಲೆ ಹಲ್ಲೆ ನಡೆಸಿದ ಕೇರಳದ ಮೂವರು ಯುವಕರನ್ನು ಅಶೋಕ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ

ADVERTISEMENT

ಕೇರಳದ ಬಸಿಲ್ ವರ್ಗೀಸ್, ತರಸ್ ರಾಜಿ ಹಾಗೂ ಸಂದೀಪ್ ಮಹಾದೇವನ್ ಬಂಧಿತರು. ಆರೋಪಿಗಳು ವಿವಿಧ ಕಾಲೇಜುಗಳಲ್ಲಿ ಪದವಿ ಓದುತ್ತಿದ್ದಾರೆ.

ಅಕ್ಟೋಬರ್ 22ರಂದು ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹರಿದಾಡುತ್ತಿದೆ.

‘ಪ್ರವಾಸಕ್ಕೆ ತೆರಳಲು ಜೂಮ್ ಕಾರ್ ಬುಕ್ ಮಾಡಿದ್ದ ವಿದ್ಯಾರ್ಥಿಗಳು, ಅದನ್ನು ತೆಗೆದುಕೊಂಡು ಹೋಗಲು ಬಂದಿದ್ದರು. ತಮ್ಮ ವಾಹನಗಳನ್ನು ಅಲ್ಲಿಯೇ ನಿಲುಗಡೆ ಮಾಡಿದ್ದರು. ಸಂತ್ರಸ್ತ ಅಜಯ್ ಅಹಮದ್‌ ಅವರು ಕಾರು ನಿಲುಗಡೆ ಮಾಡಿರುವುದನ್ನು ಪ್ರಶ್ನಿಸಿದ್ದರು. ಇದರಿಂದ ಕೋಪಗೊಂಡ ವಿದ್ಯಾರ್ಥಿಗಳು ಅಹ್ಮದ್ ಅವರೊಂದಿಗೆ ಜಗಳವಾಡಿ, ತೀವ್ರ ಹಲ್ಲೆ ನಡೆಸಿದ್ದರು. ಹಲ್ಲೆ ನಡೆಸಿದ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದರು. ವಿದ್ಯಾರ್ಥಿಗಳು ಪ್ರವಾಸವನ್ನು ರದ್ದುಗೊಳಿಸಿದರು’ ಎಂದು ಹಿರಿಯ ಅಧಿಕಾರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.