ದಾಬಸ್ ಪೇಟೆ: ಇಲ್ಲಿನ ಬರಗೇನಹಳ್ಳಿಯ ಪುಟ್ಟಗಂಗಯ್ಯ ಎಂಬುವವರ ಅಡಕೆ ತೋಟದಲ್ಲಿ ಬುಧವಾರ ಎಟಿಎಂ ಯಂತ್ರ ಸಿಕ್ಕಿದೆ.
ಪುಟ್ಟಗಂಗಯ್ಯ ಅವರು ಎಂದಿನಂತೆ ಬೆಳಿಗ್ಗೆ ತೋಟಕ್ಕೆ ಹೋದಾಗ, ತೋಟದಲ್ಲಿ ಎಟಿಎಂ ಬಿದ್ದಿರುವುದನ್ನು ಕಂಡು ದಾಬಸ್‌ಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಜ.18ರಂದು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹೆಗ್ಗೆರೆಯ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಎಟಿಎಂ ಹಾಗೂ ಅದರಲ್ಲಿನ ₹85 ಸಾವಿರ ಕಳುವಾಗಿರುವ ಸಂಬಂಧ ದೂರು ದಾಖಲಾಗಿರುವ ಮಾಹಿತಿ ತಿಳಿಯುತ್ತದೆ.
‘ಕಳ್ಳರು ಎಟಿಎಂ ಅನ್ನು ಮೊದಲು ನೀಲಗಿರಿ ತೋಪಿನಲ್ಲಿ ಇಳಿಸಿದ್ದಾರೆ. ಅಲ್ಲಿ ಸರಿ ಹೋಗುವುದಿಲ್ಲ ಎಂದು 300 ಮೀಟರ‍್ ದೂರ ಇರುವ ಅಡಕೆ ತೋಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿ ಪಂಪ್‌ಸೆಟ್ ಮನೆಯ ಬೀಗ ಒಡೆದು ವಿದ್ಯುತ್ ಬಳಸಿಕೊಂಡು, ಕಟ್ಟಿಂಗ್ ಮೆಷಿನ್‌ನಿಂದ ಯಂತ್ರವನ್ನು ತೆಗೆದು ಅದರಲ್ಲಿದ್ದ ₹85 ಸಾವಿರ ತೆಗೆದುಕೊಂಡು ಹೋಗಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.