ADVERTISEMENT

ಎಟಿಎಂಗೆ ತುಂಬಬೇಕಿದ್ದ ಹಣ ಕದ್ದು ಚಾಲಕ ಪರಾರಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2021, 18:14 IST
Last Updated 3 ಫೆಬ್ರುವರಿ 2021, 18:14 IST

ಬೆಂಗಳೂರು: ಎಟಿಎಂಗೆ ಹಣ ತುಂಬುವ ವಾಹನದ ಚಾಲಕನೊಬ್ಬ ಲಕ್ಷಾಂತರ ಹಣ ಕದ್ದು ಪರಾರಿಯಾಗಿರುವ ಘಟನೆ ಸುಬ್ರಹ್ಮಣ್ಯ ನಗರ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಪರಾರಿಯಾಗಿರುವ ಚಾಲಕ ದೊಡ್ಡಬಳ್ಳಾಪುರದ ಯೋಗೀಶ್ ಎನ್ನಲಾಗಿದೆ. ಎಟಿಎಂಗೆ ಹಣ ತುಂಬಿಸುವ ಗುತ್ತಿಗೆ ಪಡೆದಿರುವ ಸೆಕ್ಯೂರ್ ವ್ಯಾಲ್ಯೂ ಏಜೆನ್ಸಿಯ ವಾಹನಕ್ಕೆ ಆರೋಪಿ ಚಾಲಕನಾಗಿದ್ದ.

ಅಧಿಕಾರಿಗಳು ಹಾಗೂ ಗನ್‌ಮ್ಯಾನ್‌ಸುಬ್ರಹ್ಮಣ್ಯನಗರದಲ್ಲಿದ್ದ ಆಕ್ಸಿಸ್ ಬ್ಯಾಂಕ್‌ ಎಟಿಎಂಗೆ ಮಂಗಳವಾರ ರಾತ್ರಿಹಣ ತುಂಬಿಸಲು ಹೋಗಿದ್ದರು.

ADVERTISEMENT

ಈವೇಳೆ ವಾಹನದಲ್ಲಿದ್ದ ಹಣದ ಬ್ಯಾಗ್‌ನೊಂದಿಗೆ ಆರೋಪಿ ಪರಾರಿಯಾಗಿದ್ದಾನೆ.ಅಧಿಕಾರಿಗಳು ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ಕದ್ದೊಯ್ದಿರುವ ಬ್ಯಾಗ್‌ನಲ್ಲಿ ಅಂದಾಜು ₹65 ಲಕ್ಷ ಹಣ ಇತ್ತು ಎನ್ನಲಾಗಿದೆ.

‘ಕಳ್ಳತನಕ್ಕೆ ಮೊದಲೇ ಸಂಚು ರೂಪಿಸಿದ್ದ ಆರೋಪಿ, ತನ್ನ ಸುಳಿವು ಸಿಗಬಾರದೆಂದು ಸಿಸಿಟಿವಿ ಕ್ಯಾಮೆರಾ ಸಂಪರ್ಕಕಡಿತಗೊಳಿಸಿದ್ದಾನೆ. ಆರೋಪಿಗಾಗಿ ಶೋಧ ಮುಂದುವರಿದಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.