ADVERTISEMENT

‘ಆಸ್ಟ್ರೇಲಿಯಾದಲ್ಲಿ ಅಧ್ಯಯನಕ್ಕೆ ಹೆಚ್ಚಿದ ಒಲವು’

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2019, 19:43 IST
Last Updated 5 ಆಗಸ್ಟ್ 2019, 19:43 IST
ಫಿಯೋನಾ ಡೊಕಾರ್ಟಿ
ಫಿಯೋನಾ ಡೊಕಾರ್ಟಿ   

ಬೆಂಗಳೂರು: ಭಾರತದ ವಿದ್ಯಾರ್ಥಿಗಳು ಅಮೆರಿಕದ ಬದಲಿಗೆ ಆಸ್ಟ್ರೇಲಿಯಾದಲ್ಲಿ ಪದವಿಪೂರ್ವ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ’ ಎಂದು ಸಿಡ್ನಿಯ ಯುನಿವರ್ಸಿಟಿ ಆಫ್‌ ನ್ಯೂ ಸೌಥ್ ವೇಲ್ಸ್ (ಯುಎನ್‌ಎಸ್‌ಡಬ್ಲ್ಯು) ಸಂವಹನ ವಿಭಾಗದ ಉಪಾಧ್ಯಕ್ಷೆ ಫಿಯೋನಾ ಡೊಕಾರ್ಟಿ ಅವರು ತಿಳಿಸಿದ್ದಾರೆ.

‘ಯುಎನ್‌ಎಸ್‌ಡಬ್ಲ್ಯು’ ನಗರದಲ್ಲಿ ಏರ್ಪಡಿಸಿದ್ದ ‘ಇಂಡಿಯಾ ಓಪನ್ ಡೇ’ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು. ಭಾರತದ 1,200 ವಿದ್ಯಾರ್ಥಿಗಳು ‘ಯುಎನ್‌ಎಸ್‌ಡಬ್ಲ್ಯು’ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅವರ ಸಂಖ್ಯೆ ಕಳೆದ ಎರಡು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ’ ಎಂದರು.

ಸಮಾವೇಶದಲ್ಲಿ ವಿವಿಯಲ್ಲಿ ಲಭ್ಯವಿರುವ ಅವಕಾಶಗಳು ಮತ್ತು ಕೋರ್ಸ್‌ಗಳ ಬಗ್ಗೆ ಮಾಹಿತಿ ಪಡೆಯಲು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಒಂದು ಉತ್ತಮವೇದಿಕೆಯಾಗಿ ಮಾರ್ಪಟ್ಟಿತ್ತು. 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.