ADVERTISEMENT

ಪ್ಲಾಸ್ಟಿಕ್ ತ್ಯಜಿಸಿ: ಡಾ.‌ಕೆ.ಎಂ.ರಾಜು ಸಲಹೆ

​ಪ್ರಜಾವಾಣಿ ವಾರ್ತೆ
Published 31 ಮೇ 2025, 19:43 IST
Last Updated 31 ಮೇ 2025, 19:43 IST
   

ಕೆ.ಆರ್.ಪುರ: ‘ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಅನ್ನು ಬಳಸದಂತೆ ನಾವೆಲ್ಲ ಸಂಕಲ್ಪ ಮಾಡೋಣ’ ಎಂದು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಹದೇವಪುರ ವಿಭಾಗದ ಪರಿಸರ ಅಧಿಕಾರಿ ಡಾ.‌ಕೆ.ಎಂ.ರಾಜು ತಿಳಿಸಿದರು. ‌

ಗರುಡಾಚಾರ್ ಪಾಳ್ಯದಲ್ಲಿ ಆಯೋಜಿಸಿದ್ದ ಪ್ಲಾಸ್ಟಿಕ್ ಮುಕ್ತ ಪರಿಸರಕ್ಕಾಗಿ ಸೈಕ್ಲೋಥಾನ್ ಹಾಗೂ ಓಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಿಡಿತ ಫೌಂಡೇಶನ್ ಅಧ್ಯಕ್ಷ ಪರಿಸರ ಮಂಜು ಮಾತನಾಡಿ, ‘ನಾವು ಪರಿಸರವನ್ನು ಎಷ್ಟು ಸ್ವಚ್ಛವಾಗಿಟ್ಟು ಕೊಳ್ಳುತ್ತೇವೋ, ಅದು ಮುಂದಿನ ಪೀಳಿಗೆಗೆ ಸಹಕಾರಿಯಾಗುತ್ತದೆ’ ಎಂದು ಹೇಳಿದರು.

ADVERTISEMENT

ಕಾಲ್ನಡಿಗೆ ಜಾಥಾದಲ್ಲಿ ದೊರೆತ ಪ್ಲಾಸ್ಟಿಕ್ ಬಾಟಲಿಗಳು ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಲಾಯಿತು. ಮಹದೇವಪುರ ಡೆಕಥ್ಲಾನ್‌ನಿಂದ ಕಾಡುಗೋಡಿ ಟ್ರೀ ಪಾರ್ಕ್‌ವರೆಗೂ
ಸ್ವಯಂಪ್ರೇರಿತರಾಗಿ ಸುಮಾರು 200ಕ್ಕೂ ಹೆಚ್ಚು ಪರಿಸರ ಪ್ರೇಮಿಗಳು ಸೈಕಲ್ ಜಾಥಾದಲ್ಲಿ ಭಾಗಿಯಾಗಿದ್ದರು. ‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.