ADVERTISEMENT

ಬೆಂಗಳೂರು | ಅ.2 ರಿಂದ 12ರವರೆಗೆ 'ಅರಿವು: ಮಾನವೀಯತೆಯ ಜಾಗೃತಿ' ಅಭಿಯಾನ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 15:55 IST
Last Updated 26 ಸೆಪ್ಟೆಂಬರ್ 2025, 15:55 IST
   

ಬೆಂಗಳೂರು: ಬೆಂಗಳೂರಿನ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್( ಜಿಯೋ) ಕರ್ನಾಟಕದಾದ್ಯಂತ ಅ.2 ರಿಂದ 12ರವರೆಗೆ 'ಅರಿವು: ಮಾನವೀಯತೆಯ ಜಾಗೃತಿ' ಅಭಿಯಾನ ಹಮ್ಮಿಕೊಂಡಿದೆ.

ಅಭಿಯಾನದ ಅಂಗವಾಗಿ ವಿವಿಧ ಸಮಾಜ ಸೇವಾ ಚಟುವಟಿಕೆಗಳು ನಡೆಯಲಿವೆ. ಅಂತರ್ಧರ್ಮೀಯ ಸಂವಾದ, ಮಾನಸಿಕ ಆರೋಗ್ಯ ಕಾರ್ಯಾಗಾರ, ಕಲೆ, ಕವನ ಮತ್ತು ಪೋಸ್ಟರ್ ಸ್ಪರ್ಧೆ, ಸಾಮಾಜಿಕ ಮಾಧ್ಯಮ ರೀಲ್ಸ್ ಮತ್ತು ಜಾಗೃತಿ ವಿಡಿಯೊಗಳು, ಮಾಹಿತಿ ಪುಸ್ತಕ ಮತ್ತು ಕರಪತ್ರಿಕೆಗಳ ವಿತರಣೆ, ಮನೆಮನೆಗೆ ಜಾಗೃತಿ ಭೇಟಿ  ಕಾರ್ಯಕ್ರಮಗಳು ನಡೆಯಲಿವೆ ಎಂದು ಸಂಘಟನೆ ರಾಜ್ಯಾಧ್ಯಕ್ಷೆ ನವೀದಾ ಅಸ್ಸಾದಿ ತಿಳಿಸಿದರು.

‘ಅಂತರ್ಧರ್ಮೀಯ ಸಂವಾದ ಉತ್ತೇಜಿಸುವುದು, ಮಾನವೀಯ ಸಮಸ್ಯೆಗಳಿಗೆ ಸ್ಪಂದಿಸಿ ಸಮಾಜದಲ್ಲಿ ಬದಲಾವಣೆ ತರಲು ಪ್ರಯತ್ನಿಸುವುದು. ಸಾಮಾಜಿಕ ಬದಲಾವಣೆಗೆ ವೇದಿಕೆಗಳನ್ನು ಒದಗಿಸುವುದು, ಮಾನವೀಯ ಕಾರ್ಯಗಳ ಮೂಲಕ ಇಸ್ಲಾಂನ ಸಂದೇಶ ತಿಳಿಸುವುದು ಅಭಿಯಾನದ ಉದ್ದೇಶವಾಗಿದೆ’ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.