ADVERTISEMENT

ಬಿ–ಕ್ಲಿಪ್‌: ಮಹಿಳಾ ಸಾಧಕರ ಪ್ರಶಸ್ತಿಗೆ ನಾಮನಿರ್ದೇಶನ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2022, 18:10 IST
Last Updated 23 ಫೆಬ್ರುವರಿ 2022, 18:10 IST

ಬೆಂಗಳೂರು: ಬಿ–ಕ್ಲಿಪ್‌ ಹಳೆಯ ವಿದ್ಯಾರ್ಥಿಗಳ ಸಂಘವು ಎರಡನೇ ಆವೃತ್ತಿಯ ‘ಬೆಂಗಳೂರು ಮಹಿಳಾ ಸಾಧಕರ ಪ್ರಶಸ್ತಿ’ಗಳಿಗೆ ಆನ್‌ಲೈನ್ ಮೂಲಕ ನಾಮನಿರ್ದೇಶಿಸಲು ಅವಕಾಶ ಕಲ್ಪಿಸಿದೆ.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಕಾವೇರಿ ಕೇದಾರನಾಥ್, ‘100 ಮಹಿಳಾ ಸಾಧಕರಿಗೆ ಪ್ರಶಸ್ತಿ ನೀಡಲಾಗುವುದು.ಪ್ರಶಸ್ತಿಗೆ ಬೆಂಗಳೂರಿನ 198 ವಾರ್ಡ್‌ಗಳಿಂದಲೂ ಆನ್‌ಲೈನ್‌ ಮೂಲಕ ನಾಮನಿರ್ದೇಶನ ಮಾಡಬಹುದು. ವಿಶೇಷ ತೀರ್ಪುಗಾರರು ಪರಿಶೀಲನೆ ನಡೆಸಿದ ಬಳಿಕ ಆಯ್ಕೆ ನಡೆಯಲಿದೆ’ ಎಂದರು.

‘ಫೆ.26ರಂದು ವೆಬ್‌ಸೈಟ್‌ ಬಿಡುಗಡೆ ಮಾಡಲಿದ್ದೇವೆ. ಅದರಲ್ಲೇ ಆನ್‌ಲೈನ್‌ ಮೂಲಕ ನಾಮನಿರ್ದೇಶನ ಮಾಡಬಹುದು. ಮಾರ್ಚ್‌ 17ರಂದು ಸಂಜೆ 6 ಗಂಟೆಗೆ ಒರಾಯನ್ ಮಾಲ್‌ನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

ಸಂಪರ್ಕ: 9739328099

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.