ADVERTISEMENT

ಹಿಂದುಳಿದ ವರ್ಗಗಳ ಆಯೋಗದಿಂದ ವಿಶೇಷ ವರದಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 19:16 IST
Last Updated 9 ಜುಲೈ 2019, 19:16 IST
ವಿಕಾಸಸೌಧದಲ್ಲಿ ಮಂಗಳವಾರ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್‌. ಕಾಂತರಾಜ, ಜಿಲ್ಲಾವಾರು ಬಹಿರಂಗ ವಿಚಾರಣೆಗಳ ವರದಿ ಪುಸ್ತಕವನ್ನು ಹಿಂದುಳಿದ ವರ್ಗಗಳ ಇಲಾಖೆಯ ಕಾರ್ಯದರ್ಶಿ ಮೊಹಮ್ಮದ್ ಮೊಹಿಸಿನ್ ಅವರಿಗೆ ಸಲ್ಲಿಸಿದರು. ಆಯೋಗದ ಸದಸ್ಯರಾದ ಲಿಂಗಪ್ಪ ಮತ್ತು ಗೋಪಾಲ್ ಉಪಸ್ಥಿತರಿದ್ದರು.

ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಸಿದ ಬಹಿರಂಗ ವಿಚಾರಣೆಗೆ ಸಂಬಂಧಿಸಿದಂತೆ 120 ಸಲಹೆಗಳ ವರದಿಯನ್ನು ಮಂಗಳವಾರ ಹಿಂದುಳಿದ ವರ್ಗಗಳ ಇಲಾಖೆಗೆ ಸಲ್ಲಿಸಲಾಯಿತು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್. ಕಾಂತರಾಜ ಅವರು, ವಿಕಾಸಸೌಧದಲ್ಲಿ ಹಿಂದುಳಿದ ವರ್ಗಗಳ ಇಲಾಖೆಯ ಕಾರ್ಯದರ್ಶಿ ಮೊಹಮ್ಮದ್ ಮೊಹಿಸಿನ್ ಅವರಿಗೆ ವರದಿ ಸಲ್ಲಿಸಿದರು.

ಬಹಿರಂಗ ವಿಚಾರಣೆಯಲ್ಲಿ ಮೀಸಲಾತಿ ಪಟ್ಟಿಗೆ ಸೇರ್ಪಡೆಯಾಗುವ ಕುರಿತು, ಪಟ್ಟಿಯಲ್ಲಿದ್ದರೂ ಜಾತಿಗಳ ಪರ್ಯಾಯ ಪದಗಳು ಸೇರದಿರುವುದು, ಮೀಸಲಾತಿ ಪಟ್ಟಿಯಲ್ಲಿ ತಪ್ಪಾಗಿ ಹೆಸರು ಮುದ್ರಿತವಾಗಿರುವುದು ಇತ್ಯಾದಿ ಕುರಿತು ಅಹವಾಲು ಸಲ್ಲಿಕೆಯಾಗಿವೆ. ಈ ಸಂಬಂಧ ಆಯೋಗವು 120 ಸಲಹೆಗಳನ್ನು ವರದಿ ರೂಪದಲ್ಲಿ ತಯಾರಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ ಎಂದು ಕಾಂತರಾಜ ಮಾಹಿತಿ ನೀಡಿದರು.

ADVERTISEMENT

ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾದ ಲಿಂಗಪ್ಪ ಮತ್ತು ಗೋಪಾಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.