ADVERTISEMENT

ನೈಜೀರಿಯಾ ಸೇನೆಗೆ ವೈಮಾನಿಕ ಹಾರಾಟ ತರಬೇತಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2022, 19:32 IST
Last Updated 11 ಏಪ್ರಿಲ್ 2022, 19:32 IST
ಎಚ್‌ಎಎಲ್‌ನ ಹೆಲಿಕಾಪ್ಟರ್‌ ವಿಭಾಗದ ಜನರಲ್‌ ಮ್ಯಾನೇಜರ್‌ ಬಿ.ಕೆ.ತ್ರಿಪಾಠಿ ಮತ್ತು ನೈಜೀರಿಯಾದ ಸೇನಾ ಸಲಹೆಗಾರ ವಿಕ್ಟರ್‌ ಕುಜೊ ಅವರು ಒಪ್ಪಂದ ಪತ್ರಕ್ಕೆ ಸೋಮವಾರ ಸಹಿ ಮಾಡಿದರು.
ಎಚ್‌ಎಎಲ್‌ನ ಹೆಲಿಕಾಪ್ಟರ್‌ ವಿಭಾಗದ ಜನರಲ್‌ ಮ್ಯಾನೇಜರ್‌ ಬಿ.ಕೆ.ತ್ರಿಪಾಠಿ ಮತ್ತು ನೈಜೀರಿಯಾದ ಸೇನಾ ಸಲಹೆಗಾರ ವಿಕ್ಟರ್‌ ಕುಜೊ ಅವರು ಒಪ್ಪಂದ ಪತ್ರಕ್ಕೆ ಸೋಮವಾರ ಸಹಿ ಮಾಡಿದರು.   

ಬೆಂಗಳೂರು: ನೈಜೀರಿಯಾ ಸೇನೆಯ ವೈಮಾನಿಕ ವಿಭಾಗದ ಆರು ಅಧಿಕಾರಿಗಳಿಗೆ ಎಚ್‌ಎಎಲ್‌ ನಿರ್ಮಿತ ಚೇತಕ್‌ ಹೆಲಿಕಾಪ್ಟರ್‌ನಲ್ಲಿ ಹಾರಾಟದ ಎರಡನೇ ಹಂತದ ತರಬೇತಿ ಸೋಮವಾರ ಆರಂಭವಾಗಿದೆ.

ಈ ಸಂಬಂಧ ನೈಜೀರಿಯಾ ಸೇನೆ ಮತ್ತು ಎಚ್‌ಎಎಲ್‌ ಒಪ್ಪಂದಕ್ಕೆ ಸಹಿ ಮಾಡಿವೆ. ಮೊದಲ ಹಂತದ ತರಬೇತಿಗೆಯನ್ನು 2021ರ ಡಿಸೆಂಬರ್‌ನಲ್ಲಿ ನೀಡಲಾಗಿತ್ತು. ಎರಡನೇ ಹಂತದ ಹಾರಾಟತರಬೇತಿಗೆ ಚೇತಕ್‌ ಹೆಲಿಕಾಪ್ಟರ್‌ ಅನ್ನು ನಿಗದಿ ಮಾಡಿದ್ದು, ತರಬೇತಿ ಸೋಮವಾರವೇ ಆರಂಭವಾಗಿದ್ದು, ಡಿಸೆಂಬರ್‌ಗೆ ಮುಕ್ತಾಯವಾಗಲಿದೆ. ಆರೂ ಅಧಿಕಾರಿಗಳಿಗೆ ಒಟ್ಟು 70 ಗಂಟೆಗಳ ಹಾರಾಟದ ತರಬೇತಿ ನೀಡಲಾಗುವುದು ಎಂದು ಎಚ್‌ಎಎಲ್‌ನ ಹೆಲಿಕಾಪ್ಟರ್‌ ವಿಭಾಗದ ಜನರಲ್‌ ಮ್ಯಾನೇಜರ್‌ ಬಿ.ಕೆ.ತ್ರಿಪಾಠಿ ತಿಳಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT