ADVERTISEMENT

ಬೆಂಗಳೂರು | ನಾಪತ್ತೆಯಾದವರ ಮಾಹಿತಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 4:38 IST
Last Updated 29 ಜೂನ್ 2025, 4:38 IST
   

ಬೆಂಗಳೂರು: ಬೇಗೂರಿನ ಎಂ.ಎನ್.ಕ್ರೆಡೆನ್ಸ್‌ ಫ್ಲೋರಾ ಅಪಾರ್ಟ್‌ಮೆಂಟ್‌ನ ಇಂಗು ಗುಂಡಿಯಲ್ಲಿ ಮನುಷ್ಯನ ಅಸ್ಥಿಪಂಜರ ಪತ್ತೆಯಾದ ಹಿನ್ನೆಲೆಯಲ್ಲಿ ಬೇಗೂರು ಠಾಣೆ ಸೇರಿದಂತೆ ಸುತ್ತಮುತ್ತಲ ಠಾಣೆಗಳ ವ್ಯಾಪ್ತಿಯಲ್ಲಿ 2012ರಿಂದ ದಾಖಲಾಗಿರುವ ನಾಪತ್ತೆ ಪ್ರಕರಣಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಜೂನ್ 16ರಂದು ಪತ್ತೆಯಾಗಿದ್ದ ಅಸ್ಥಿಪಂಜರ ಮನುಷ್ಯನದ್ದೇ ಎಂದು ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ವರದಿ ನೀಡಿದೆ. ಹಾಗಾಗಿ ಕೂಲಂಕಷ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ.

ತನಿಖೆ ಪ್ರಾಥಮಿಕ ಹಂತದಲ್ಲಿದ್ದು, ಎಫ್‌ಎಸ್‌ಎಲ್‌ ವರದಿ ಕೈ ಸೇರಿದ ಬಳಿಕ, ವಿಶ್ಲೇಷಿಸಿ ಯಾವ ರೀತಿಯ ತನಿಖೆ ನಡೆಸಬೇಕು ಎಂಬುದನ್ನು ನಿರ್ಧರಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

‘ವ್ಯಕ್ತಿ ಎಷ್ಟು ವರ್ಷಗಳ ಹಿಂದೆ ಮೃತನಾಗಿದ್ದಾನೆ ಎಂದು ಖಚಿತವಾಗಿ ಹೇಳಲಾಗದು. ಬುರುಡೆ, ಮೂಳೆಗಳು ಹಾಗೂ ಪ್ಯಾಂಟ್‌ ಪತ್ತೆಯಾಗಿದೆ. ಡಿಎನ್‌ಎ ಪರೀಕ್ಷೆಗೆ ಮೂಳೆ ಕಳುಹಿಸಲಾಗುವುದು. ಈ ಪರೀಕ್ಷೆಯಿಂದ ಮೃತನ ವಯಸ್ಸು ಸೇರಿದಂತೆ ಇತರೆ ಮಾಹಿತಿ ತಿಳಿಯಬಹುದು‘ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಾರ್ಟ್‌ಮೆಂಟ್‌ಗೆ 2012ರಲ್ಲಿ ಅಡಿಪಾಯ ಹಾಕಲಾಗಿದ್ದು, 2016ರಲ್ಲಿ ಪೂರ್ಣಗೊಂಡಿತ್ತು. ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕೂ ಮುನ್ನ ಈ ಜಾಗದಲ್ಲಿ ಸ್ಮಶಾನ ಇತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಮತ್ತೆ ಕೆಲವರು ಈ ಸ್ಥಳ ಜಮೀನಾಗಿತ್ತು ಎಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.