ADVERTISEMENT

ಬೆಂಗಳೂರಿನಲ್ಲಿ ಬೆಳ್ಳಂ ಬೆಳಿಗ್ಗೆ ಜೋರು ಮಳೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2019, 2:09 IST
Last Updated 23 ಸೆಪ್ಟೆಂಬರ್ 2019, 2:09 IST
ಬೆಂಗಳೂರು ನಗರದಲ್ಲಿ ಸೋಮವಾರ ಬೆಳಗಿನಜಾವ ಮಳೆ ಬಿತ್ತು.
ಬೆಂಗಳೂರು ನಗರದಲ್ಲಿ ಸೋಮವಾರ ಬೆಳಗಿನಜಾವ ಮಳೆ ಬಿತ್ತು.   

ಬೆಂಗಳೂರು: ನಗರದ ಹಲವೆಡೆಲ್ಲಿ ಸೋಮವಾರ ಬೆಳ್ಳಂ ಬೆಳಿಗ್ಗೆ ಜೋರು ಮಳೆ ಸುರಿಯಿತು.

ಬೆಳಗಿನಜಾವ 4.30ರ ಸುಮಾರಿಗೆ ಆರಂಭವಾದ ಮಳೆ ಹಲವು ಕಡೆ ಅರ್ಧ ತಾಸಿಗೂ ಹೆಚ್ಚು ಧಾರಾಕಾರವಾಗಿ ಸುರಿಯಿತು. 7.30ರ ವರೆಗೆ ಮಳೆ ಬಿಡವು ಕೊಟ್ಟು ಆಗಾಗ ಬೀಳುತ್ತಲೇ ಇತ್ತು.

ರಾಜಾಜಿನಗರ, ಮೆಜೆಸ್ಟಿಕ್‌, ವಿಜಯನಗರ, ಬಸವೇಶ್ವರ ನಗರ, ಎಂ.ಜಿ ರಸ್ತೆ, ಹೊಸಳ್ಳಿ, ಮೈಸೂರು ರಸ್ತೆ ಸೇರಿದಂತೆ ಅಲ್ಲಲ್ಲಿ ಧಾರಾಕಾರ ಮಳೆ ಬಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.