
ಸಾವು (ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಜೀವನ್ ಬೀಮಾ ನಗರ ಸಂಚಾರ ಠಾಣಾ ವ್ಯಾಪ್ತಿಯ ಇಂದಿರಾನಗರದ ಡಬಲ್ ರಸ್ತೆಯ 12ನೇ ಮುಖ್ಯರಸ್ತೆಯ ಜಂಕ್ಷನ್‌ನಲ್ಲಿ ಗುರುವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ತಮಿಳುನಾಡಿನ ತಿಪ್ಪಸಂದ್ರದ ನಿವಾಸಿ ಸೋಲಾ ಗುರುಸ್ವಾಮಿ (59) ಮೃತಪಟ್ಟವರು.
ಗುರುಸ್ವಾಮಿ ಗುರುವಾರ ಬೆಳಿಗ್ಗೆ 10.15ರ ಸುಮಾರಿಗೆ ಸ್ಕೂಟರ್‌ನಲ್ಲಿ ಕೇಂಬ್ರಿಡ್ಜ್ ಲೇಔಟ್ ಕಡೆಗೆ ತೆರಳುತ್ತಿದ್ದರು. ಇಂದಿರಾನಗರದ ಡಬಲ್ ರಸ್ತೆಯ 12ನೇ ಮುಖ್ಯ ರಸ್ತೆಯ ಜಂಕ್ಷನ್ ಕಡೆಯಿಂದ ಶಾಂತಿಸಾಗರ್ ಹೋಟೆಲ್ ಜಂಕ್ಷನ್ ಕಡೆಗೆ ಅತಿ ವೇಗವಾಗಿ ಕಾರೊಂದು ಬಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸುಮಾರು 20 ಅಡಿ ದೂರದವರೆಗೆ ದ್ವಿಚಕ್ರ ವಾಹನ ಹಾಗೂ ಸವಾರನ ಸಮೇತ ಕಾರು ಎಳೆದೊಯ್ದಿದೆ. ಗುರುಸ್ವಾಮಿ ಅವರು ಹೆಲೈಟ್ ಧರಿಸಿದ್ದರೂ ಅವರ ತಲೆಗೆ ಗಂಭೀರ ಗಾಯವಾಗಿ ಮೃತಪಟ್ಟಿದ್ದಾರೆ.
ಕಾರು ಚಾಲಕ ರವಿಚಂದ್ರ ಅತಿ ವೇಗದಿಂದ ಚಾಲನೆ ಮಾಡಿ ಬಂದಿರುವುದು ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಜೀವನ್ ಬೀಮಾ ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.