ADVERTISEMENT

ಫಿಲ್ಮ್‌ ಮೇಕಿಂಗ್‌ ಎಂ.ಎಸ್ಸಿ ಪದವಿಗೆ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 16:25 IST
Last Updated 5 ಆಗಸ್ಟ್ 2025, 16:25 IST
<div class="paragraphs"><p>ಅರ್ಜಿ ಆಹ್ವಾನ</p></div>

ಅರ್ಜಿ ಆಹ್ವಾನ

   

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ವಿದ್ಯುನ್ಮಾನ ಮಾಧ್ಯಮ(ಎಲೆಕ್ಟ್ರಾನಿಕ್ ಮೀಡಿಯಾ) ವಿಭಾಗದಲ್ಲಿ ಎಂ.ಎಸ್ಸಿ ಎಲೆಕ್ಟ್ರಾನಿಕ್ ಮೀಡಿಯಾ, ಎಂಎಸ್ಸಿ ಫಿಲ್ಮ್ ಮೇಕಿಂಗ್ ಹಾಗೂ ಎಂಎಸ್ಸಿ ಗ್ರಾಫಿಕ್ಸ್ ಆಂಡ್ ಆನಿಮೇಷನ್‌ ಸ್ನಾತಕೋತ್ತರ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಉನ್ನತ ಶಿಕ್ಷಣ‌ ಇಲಾಖೆಯ ಯುಯುಸಿಎಂಎಸ್ ಆನ್‌ಲೈನ್‌ ಪೋರ್ಟಲ್ (https://uucms.karnataka.gov.in) ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಆಗಸ್ಟ್ 15 ಕೊನೆ‌ ದಿನ. ದಂಡ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ಆಗಸ್ಟ್ 18 ಕೊನೆಯ ದಿನ.

ADVERTISEMENT

ಸಿನಿಮಾ ಕ್ಷೇತ್ರ, ಗ್ರಾಫಿಕ್ ಮತ್ತು ಆನಿಮೇಷನ್ ಕ್ಷೇತ್ರದಲ್ಲಿ ಕೆಲಸ ಮಾಡಬೇಕೆಂಬ ಬಡ ಮತ್ತು ಗ್ರಾಮೀಣ ಪ್ರತಿಭೆಗಳಿಗೆ ಸಹಾಯವಾಗಲೆಂದು ಕೋರ್ಸ್‌ಗಳಿಗೆ ಕಡಿಮೆ ಶುಲ್ಕ ನಿಗದಿಪಡಿಸಲಾಗಿದೆ.

ವಿದ್ಯುನ್ಮಾನ ವಿಭಾಗ ಅನುಭವಿ ಶಿಕ್ಷಕ ವರ್ಗವನ್ನು ಹೊಂದಿದ್ದು, ವೃತ್ತಿ ಕ್ಷೇತ್ರದಲ್ಲಿನ ಬೇಡಿಕೆಗೆ ತಕ್ಕಂತೆ ಪಠ್ಯವನ್ನು ಹೊಂದಿದೆ. ಅತ್ಯಾಧುನಿಕ ಸ್ಟುಡಿಯೊ, ಉಪಕರಣಗಳು, ಕಂಪ್ಯೂಟರ್ ಲ್ಯಾಬ್, ತಂತ್ರಜ್ಞಾನಗಳ ಮೂಲಕ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ.

ವಿಶ್ವವಿದ್ಯಾಲಯವು ವೃತ್ತಿಪರ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಕೋರ್ಸ್‌ ನಂತರ ವಿದ್ಯಾರ್ಥಿಗಳಿಗೆ ವಿಷಯ ತಜ್ಞರು, ಪರಿಣತರಿಂದ ಮಾರ್ಗದರ್ಶನ ನೀಡಿ, ಉದ್ಯೋಗಾವಕಾಶ ಕಲ್ಪಿಸಲು ನೆರವಾಗಲಿದೆ. ಬೆಂಗಳೂರು ವಿಶ್ವವಿದ್ಯಾಲಯ ಮಲ್ಟಿಮೀಡಿಯಾ ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವ ಉದ್ದೇಶ ಹೊಂದಿದ್ದು ವಿದ್ಯಾರ್ಥಿಗಳಿಗೆ ಮತ್ತಷ್ಟು ಅನುಕೂಲವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.