ADVERTISEMENT

ಬೆಂಗಳೂರು ಕೇಂದ್ರ ವಿ.ವಿ ಫಲಿತಾಂಶ ಪ್ರಕಟ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2019, 20:02 IST
Last Updated 20 ಫೆಬ್ರುವರಿ 2019, 20:02 IST

ಬೆಂಗಳೂರು: ಡಿಸೆಂಬರ್‌ನಲ್ಲಿ ನಡೆದ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ವಿವಿಧ ಪದವಿ ಕೋರ್ಸ್‌ಗಳ ಮೊದಲ ಸೆಮಿಸ್ಟರ್‌ಫಲಿತಾಂಶ ಪ್ರಕಟವಾಗಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಕುಲಪತಿ ಪ್ರೊ.ಎಸ್.ಜಾಫೆಟ್, ‘ಒಟ್ಟು 29,979 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 16,337 ಮಂದಿ ಉತ್ತೀರ್ಣರಾಗಿದ್ದಾರೆ. 13,566 ಮಂದಿ ಅನುತ್ತೀರ್ಣರಾಗಿದ್ದಾರೆ. ಹೈಕೋರ್ಟ್‌ ನಿರ್ದೇಶನ ಮತ್ತು ಪರೀಕ್ಷಾ ಅಕ್ರಮದ ಹಿನ್ನೆಲೆಯಲ್ಲಿ76 ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆ’ ಎಂದು ಹೇಳಿದರು.

‘ಇದು ಕೇಂದ್ರ ವಿಶ್ವವಿದ್ಯಾಲಯದ ಮೊದಲ ಶೈಕ್ಷಣಿಕ ವರ್ಷದಫಲಿತಾಂಶ. ಇ–ಆಡಳಿತ ಅಳವಡಿಸಿಕೊಂಡುಪರೀಕ್ಷಾ ಪ್ರಕ್ರಿಯೆ ಗಣಿಕೀಕೃತಗೊಳಿಸಿದ್ದರಿಂದ ಕಡಿಮೆ ಅವಧಿಯಲ್ಲಿಯೇ ಫಲಿತಾಂಶ ನೀಡಿದ್ದೇವೆ’ ಎಂದರು.

ADVERTISEMENT

‘ಫಲಿತಾಂಶವನ್ನು ವಿಶ್ವವಿದ್ಯಾಲಯದ ಅಧಿಕೃತಜಾಲತಾಣದಲ್ಲಿ ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳ ಮೊಬೈಲ್‌ ಸಂಖ್ಯೆಗೆ ಸಂದೇಶವನ್ನೂ ರವಾನಿಸಿದ್ದೇವೆ.ನ್ಯಾಷನಲ್‌ ಅಕಾಡೆಮಿ ಡೆಪಾಸಿಟರಿ(ಎನ್‌ಎಡಿ) ಮಾದರಿಯಲ್ಲಿ ಅಂಕಪಟ್ಟಿಗಳನ್ನು ಗಣಕೀಕೃತಗೊಳಿಸಿದ್ದೇವೆ’ ಎಂದು ತಿಳಿಸಿದರು.

‘ಪರೀಕ್ಷೆಯ ಕುರಿತು ಇರುವ ಅನುಮಾನಗಳನ್ನು ಪರಿಹರಿಸಲುಆನ್‌ಲೈನ್‌ ಸಹಾಯವಾಣಿ ಸ್ಥಾಪಿಸಲಾಗಿತ್ತು. ಇದರ ಮೂಲಕ ವಿದ್ಯಾರ್ಥಿಗಳ 25000ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸಲಾಯಿತು. ಪರೀಕ್ಷಾ ಪ್ರಕ್ರಿಯೆಯ ಮಾಹಿತಿಯುಳ್ಳ ಪರೀಕ್ಷಾ ಕೈಪಿಡಿಯನ್ನು ಹೊರತರಲಾಗಿದೆ’ ಎಂದರು.

ವಿಶ್ವವಿದ್ಯಾಲಯದ ಜಾಲತಾಣwww.bcu.ac.in ನಲ್ಲಿ ಫಲಿತಾಂಶ ನೋಡಬಹುದು

ಅಂಕಿ–ಅಂಶಗಳು

54.5 - ಶೇಕಡಾವಾರು ಫಲಿತಾಂಶ

13,566 - ಉತ್ತೀರ್ಣರಾದ ವಿದ್ಯಾರ್ಥಿಗಳು

₹70 ಲಕ್ಷ - ಮೌಲ್ಯಮಾಪನಕ್ಕೆ ಖರ್ಚಾದ ಹಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.