ಬೆಂಗಳೂರು: ನಗರದಾದ್ಯಂತ ನೀರಿನ ಸೋರಿಕೆ ತಡೆಯಲು ಬೆಂಗಳೂರು ಜಲಮಂಡಳಿ ರೋಬೋಟಿಕ್ ತಂತ್ರಜ್ಞಾನ ಅಳವಡಿಕೆಗೆ ಮುಂದಾಗಿದೆ.
ಇದಲ್ಲದೇ ನೀರು ಹಾಗೂ ಒಳಚರಂಡಿಯ ಅನಧಿಕೃತ ಸಂಪರ್ಕಗಳನ್ನು ಪತ್ತೆ ಹಚ್ಚಲು ಈ ಹಿಂದೆ ಘೋಷಿಸಿದ್ದ ನೀಲಿ ಕಾರ್ಯಪಡೆ ಸೇವೆ ಆರಂಭಿಸಲಿದೆ.
‘ಸೋರಿಕೆಯ ನಿಖರ ಸ್ಥಳವನ್ನು ಪತ್ತೆಹಚ್ಚಿ ಅನಗತ್ಯ ರಸ್ತೆ ತೋಡುವಿಕೆಗೆ ಕಡಿವಾಣ ಹಾಕಲು ಮಂಡಳಿಯು ಪ್ರಮುಖ ರೋಬೋಟಿಕ್ ತಂತ್ರಜ್ಞಾನ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಈ ತಂತ್ರಜ್ಞಾನ ಕಾರ್ಯ ನಿರ್ವಹಿಸಲಿದೆ’ ಎಂದು ಜಲಮಂಡಳಿ ಅಧ್ಯಕ್ಷ ರಾಮಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಈ ಎರಡೂ ಯೋಜನೆಗಳಿಗೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರು ನ.19ರಂದು ಚಾಲನೆ ನೀಡುವರು ಎಂದು ಹೇಳಿದ್ದಾರೆ.
ಜಲಮಂಡಳಿಯ 16 ಉಪವಿಭಾಗಕ್ಕೆ ಒಂದು ವಿಶೇಷ ‘ಬ್ಲೂ ಫೋರ್ಸ್’ ತಂಡ ರಚಿಸಿದೆ. ವಿಶೇಷ ದಳವು ಈ ವಾರದಿಂದಲೇ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ.ರಾಮಪ್ರಸಾತ್ ಮನೋಹರ್, ಅಧ್ಯಕ್ಷರು, ಜಲಮಂಡಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.