ADVERTISEMENT

ಬೆಂಗಳೂರು: ಬಂಜಾರ ಸಾಂಸ್ಕೃತಿಕ ಉತ್ಸವ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2022, 15:56 IST
Last Updated 29 ನವೆಂಬರ್ 2022, 15:56 IST
‘ಬಂಜಾರ ಸಾಂಸ್ಕೃತಿಕ ಉತ್ಸವ’ ಉದ್ಘಾಟನಾ ಸಮಾರಂಭದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ವಿಧಾನಪರಿಷತ್ ಮುಖ್ಯ ಸಚೇತಕ ಪ್ರಕಾಶ್ ರಾಠೋಡ್, ಕಲ್ಬುರ್ಗಿ ಸಂಸದ ಡಾ.ಉಮೇಶ್ ಜಾಧವ್, ಬಂಜಾರ ಸಮುದಾಯದ ಸಿದ್ಧಲಿಂಗ ದೇವರು ಹಾಗೂ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಸಂಘದ ಅಧ್ಯಕ್ಷ ಜಿ.ಕುಮಾರನಾಯ್ಕ, ಧಾನ ಕಾರ್ಯದರ್ಶಿ ಡಾ. ಬಿ.ಆರ್ ಹರೀಶ್ ನಾಯ್ಕ್ ಪದಾಧಿಕಾರಿಗಳು ಹಾಜರಿದ್ದರು
‘ಬಂಜಾರ ಸಾಂಸ್ಕೃತಿಕ ಉತ್ಸವ’ ಉದ್ಘಾಟನಾ ಸಮಾರಂಭದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ವಿಧಾನಪರಿಷತ್ ಮುಖ್ಯ ಸಚೇತಕ ಪ್ರಕಾಶ್ ರಾಠೋಡ್, ಕಲ್ಬುರ್ಗಿ ಸಂಸದ ಡಾ.ಉಮೇಶ್ ಜಾಧವ್, ಬಂಜಾರ ಸಮುದಾಯದ ಸಿದ್ಧಲಿಂಗ ದೇವರು ಹಾಗೂ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಸಂಘದ ಅಧ್ಯಕ್ಷ ಜಿ.ಕುಮಾರನಾಯ್ಕ, ಧಾನ ಕಾರ್ಯದರ್ಶಿ ಡಾ. ಬಿ.ಆರ್ ಹರೀಶ್ ನಾಯ್ಕ್ ಪದಾಧಿಕಾರಿಗಳು ಹಾಜರಿದ್ದರು   

ಬೆಂಗಳೂರು:ಬಂಜಾರ ಸಮುದಾಯದ ಸಾಂಪ್ರದಾಯಿಕ ಕಲೆ, ಸಂಸ್ಕೃತಿ, ಆಚಾರ-ವಿಚಾರ, ಭಾಷೆ ಮತ್ತು ಮೌಖಿಕ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ದೀಪಾವಳಿ ಅಂಗವಾಗಿ ರಾಜ್ಯಮಟ್ಟದ ‘ಬಂಜಾರ ಸಾಂಸ್ಕೃತಿಕ ಉತ್ಸವ’ವನ್ನು ಏರ್ಪಡಿಸಲಾಗಿತ್ತು.

ರಾಜ್ಯ ಬಂಜಾರ ನೌಕರರ ಸಾಂಸ್ಕೃತಿಕ ಸಂಘ ಮತ್ತು ತಾಂಡಾ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಉತ್ಸವ ನಡೆಯಿತು.

ಬಂಜಾರ ಸಾಂಸ್ಕೃತಿಕ ಉತ್ಸವದಲ್ಲಿ ಬಂಜಾರ ಭಾಷೆ, ಕಲೆ ಸಂಸ್ಕೃತಿ ಹಾಗೂ ತಾಂಡಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳ ಕುರಿತು ಅರಿವು-ಜಾಗೃತಿ ಮೂಡಿಸಲಾಯಿತು.ಬಂಜಾರ ಸಮುದಾಯದ ಸಿದ್ಧಲಿಂಗ ದೇವರು ಹಾಗೂ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ADVERTISEMENT

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ವಿಧಾನ ಪರಿಷತ್‌ನ ಮುಖ್ಯ ಸಚೇತಕ ಪ್ರಕಾಶ್ ರಾಠೋಡ್, ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್, ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷ ಎಂ.ಬಸವರಾಜನಾಯ್ಕ, ತಾಂಡಾ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷೆ ಜಲಜಾನಾಯ್ಕ, ಬಾಲರಾಜ್ ನಾಯ್ಕ, ಮಹಾಪೋಷಕ ಬಿ.ಹೀರಾನಾಯ್ಕ, ತಾಂಡಾ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಂದ್ರಾನಾಯಕ್, ಸಂಘದ ಅಧ್ಯಕ್ಷ ಜಿ.ಕುಮಾರನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಿಡಿಎ ಉಪ ಕಾರ್ಯದರ್ಶಿ ಹಾಗೂ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಬಿ.ಆರ್. ಹರೀಶ್ ನಾಯ್ಕ, ಖಜಾಂಚಿ ಕೆ.ಆರ್.ಕುಮಾರನಾಯ್ಕ, ಸಂಘದ ಪದಾಧಿಕಾರಿಗಳಾದ ಭೋಜ್ಯಾನಾಯ್ಕ, ಗುರುನಾಥ್, ಜಯರಾಜ್, ವೆಂಕಟೇಶ್ವರ ನಾಯ್ಕ, ಬಂಜಾರ ಬಂಧು ರಮೇಶ್, ಸುರೇಶ್ ನಾಯ್ಕ, ಜಗದೀಶ್ ಬಾಬು, ರವಿಕುಮಾರ್, ಡಾ.ರಮೇಶ್ ನಾಯ್ಕ, ಬಿಟಿವಿ ನಾಗರಾಜ್, ಡಾ.ಪರಮೇಶ್ ನಾಯ್ಕ, ಸುನಿತಾ ಆನಂದ್ ಕುಮಾರ್, ಕುಸುಮಾಬಾಯಿ ಕಾರ್ಯಕ್ರಮ ನಿರ್ವಹಿಸಿದರು.

ಐಎಎಸ್‌ಗೆ ಪದೋನ್ನತಿ ಹೊಂದಿದ ಶ್ರೀರೂಪ ಸೇರಿ ವಿವಿಧ ಕ್ಷೇತ್ರಗಳಲ್ಲಿರುವ ಬಂಜಾರ ಸಮುದಾಯದವರು ಭಾಗವಹಿಸಿದ್ದರು. ಡಾ.ಭಿಕ್ಷುನಾಯ್ಕ ಅವರ ಕಲಾತಂಡ ಸಭಿಕರನ್ನು ರಂಜಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.