ADVERTISEMENT

ಮಕ್ಕಳಿಗೆ ದಾರ್ಶನಿಕರ ತತ್ವ– ವಿಚಾರ ತಿಳಿಸಿ: ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 18 ಮೇ 2025, 14:43 IST
Last Updated 18 ಮೇ 2025, 14:43 IST
ಸಮಾರಂಭದಲ್ಲಿ ವೀರಶೈವ ಲಿಂಗಾಯತ ಸಮುದಾಯದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಅಭಿನಂದಿಸಲಾಯಿತು
ಸಮಾರಂಭದಲ್ಲಿ ವೀರಶೈವ ಲಿಂಗಾಯತ ಸಮುದಾಯದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಅಭಿನಂದಿಸಲಾಯಿತು   

ಪೀಣ್ಯ ದಾಸರಹಳ್ಳಿ: ‘ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ದಾರ್ಶನಿಕರ ತತ್ವಗಳನ್ನು, ಆಚಾರ–ವಿಚಾರಗಳನ್ನು ಕಲಿಸಬೇಕು. ಸಂಸ್ಕಾರವಂತ ಮಕ್ಕಳು ಮನೆಗೆ ಮತ್ತು ಸಮಾಜಕ್ಕೆ ದಾರಿದೀಪವಾಗುತ್ತಾರೆ' ಎಂದು ಆನೇಕಲ್ ವೀರಧರ್ಮ ಸಿಂಹಾಸನ ಸಂಸ್ಥಾನ ಮಠದ ಪಟ್ಟದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಚಿಕ್ಕಬಾಣಾವರದ ರಾಘವೇಂದ್ರ ಪವಮಾನ ಮಂದಿರದಲ್ಲಿ ವಿಶ್ವವೀರಶೈವ ಲಿಂಗಾಯತ ವೇದಿಕೆ ಸಹಯೋಗದೊಂದಿಗೆ ಶ್ರೀ ವೀರಶೈವ ಲಿಂಗಾಯತ ವೇದಿಕೆ ಆಯೋಜಿಸಿದ್ದ ಶಿವಕುಮಾರ ಸ್ವಾಮೀಜಿ ಅವರ 118ನೇ ಜನ್ಮದಿನೋತ್ಸವ, ವೇದಿಕೆಯ 14ನೇ ವರ್ಷದ ವಾರ್ಷಿಕೋತ್ಸವ, ಬಸವ ಜಯಂತಿ ಮತ್ತು ರೇಣುಕಾಚಾರ್ಯ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಜಾನಪದ ಪರಿಷತ್ತಿನ ದಾಸರಹಳ್ಳಿ ಕ್ಷೇತ್ರ ಘಟಕದ ಅಧ್ಯಕ್ಷ ವೈ.ಬಿ.ಎಚ್ ಜಯದೇವ್, 'ಕ್ರಾಂತಿಯೋಗಿ ಬಸವಣ್ಣನವರನ್ನು ನಮ್ಮ ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಆದರೆ ಬಸವಣ್ಣನವರು ಇಡೀ ವಿಶ್ವಕ್ಕೆ ಅತ್ಯುತ್ತಮ ಸಂದೇಶ ಕೊಟ್ಟ ವಿಶ್ವದ ಸಾಂಸ್ಕೃತಿಕ ನಾಯಕ' ಎಂದರು.

ADVERTISEMENT

ಸಮಾರಂಭದಲ್ಲಿ ಉಚಿತ ಲಿಂಗ ದೀಕ್ಷೆ, ಕವಯಿತ್ರಿ ಪುಷ್ಪ ಬಸವರಾಜ ಬಣಕಾರ ಅವರ 'ಎನ್ನೊಳಗಣ ಬಸವಪ್ರಭು' ಕವನ ಸಂಕಲನ ಬಿಡುಗಡೆ, ಭೂಮಿಕಾ ಕೊಣ್ಣೂರ ಅವರಿಂದ ಭರತನಾಟ್ಯ, ಪ್ರತಿಭಾ ಪುರಸ್ಕಾರ, ಭಕ್ತಿಗೀತೆಗಳ ಗಾಯನ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳು ನಡೆದವು.

ಶಿವಾಜಿನಗರದ ಜಂಗಮ ಮಠದ ಚನ್ನಬಸವಾನಂದ ಸ್ವಾಮೀಜಿ, ವೇದಿಕೆಯ ಕಾರ್ಯದರ್ಶಿ ಎಂ.ಎಚ್. ಪಾಟೀಲ್, ಸಮಾಜ ಸೇವಕರಾದ ಎಂ.ಬಿ. ದಯಾನಂದ್, ಎಂ.ಕೆ. ಜಗದೀಶ್, ಉತ್ತರ ಕರ್ನಾಟಕ ಸಂಘಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ್ ಮೇಟಿ, ಲತಾ ಕುಂದರಗಿ, ಅಶೋಕ್ ಎಸ್ ಪಾಟೀಲ್, ಶಿವಗಂಗಾಧರ್, ಹನುಮಂತಪ್ಪ ಮೇಡೆಗಾರ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.