ADVERTISEMENT

ಬಸವೇಶ್ವರ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 7 ಮೇ 2019, 20:02 IST
Last Updated 7 ಮೇ 2019, 20:02 IST
ಬಸವಣ್ಣ ದೇವರ ರಥೋತ್ಸವದಲ್ಲಿ ಭಾಗವಹಿಸಿದ್ದ ಜನಸಮೂಹ
ಬಸವಣ್ಣ ದೇವರ ರಥೋತ್ಸವದಲ್ಲಿ ಭಾಗವಹಿಸಿದ್ದ ಜನಸಮೂಹ   

ನೆಲಮಂಗಲ: ಬಸವಣ್ಣ ದೇವರ ಮಠದಲ್ಲಿ ಬಸವೇಶ್ವರರ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ರಥೋತ್ಸವಕ್ಕೆ ಮಠದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಚಾಲನೆ ನೀಡಿದರು. ರಥವನ್ನು ಎಳೆಯುತ್ತಿದ್ದಂತೆ ಭಕ್ತರು ಹೂಗಳನ್ನು ಚೆಲ್ಲಿ ಭಕ್ತಿ ಮೆರೆದರು. ಬಂಡೆಮಠದ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು.

ಚಂಡೆಮದ್ದಳೆ, ಕಂಸಾಳೆ, ನಗಾರಿ, ನಂದಿಧ್ವಜದ ಜನಪದ ಕಲಾ ಪ್ರಕಾರಗಳೊಂದಿಗೆ, ಭಕ್ತರ ಜಯಘೋಷಗಳೊಂದಿಗೆ ರಥೋತ್ಸವ ಸಾಗಿತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ADVERTISEMENT

ಅಶ್ವಾರೂಢ ಬಸವೇಶ್ವರರ ದೊಡ್ಡ ಕಂಚಿನ ಪ್ರತಿಮೆಯನ್ನು ಹಾಗೂ ಸುತ್ತಮುತ್ತಲ ಹಳ್ಳಿಗಳಿಂದ ತಂದಿದ್ದ ಉತ್ಸವ ಬಸವಣ್ಣರನ್ನು ಜನಪದ ಕಲಾ ತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಜೆ ಮೆರವಣಿಗೆ ಮಾಡಲಾಯಿತು.

ಬಸವ ಜಯಂತಿ

ಯಲಹಂಕ: ರೇಣುಕಾದಿ ಪಂಚಚಾರ್ಯ ವೀರಶೈವ ಸಮಿತಿಯು ಆನಂದರಾಮ ಭಜನಾಮಂಡಳಿ ಮಂಟಪದಲ್ಲಿ ಬಸವ ಜಯಂತಿ ಆಚರಿಸಿತು.

ಭಕ್ತರು ಬಸವಣ್ಣ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ನೆರವೇರಿಸಿದರು. ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಬಸವಣ್ಣರ ಭಾವಚಿತ್ರದ ಮೆರವಣಿಗೆ ಸಂಜೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.