ADVERTISEMENT

ಬಿಬಿಎಂಪಿ ಬಜೆಟ್ ಮಂಡನೆ

10899.23 ಕೋಟಿ ಬಿಬಿಎಂಬಿ ಬಜೆಟ್ ಗಾತ್ರ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2020, 8:55 IST
Last Updated 20 ಏಪ್ರಿಲ್ 2020, 8:55 IST
ಬಿಬಿಎಂಪಿ ಆಯವ್ಯಯ ಮಂಡನೆ
ಬಿಬಿಎಂಪಿ ಆಯವ್ಯಯ ಮಂಡನೆ   

ಬೆಂಗಳೂರು:ಬಿಬಿಎಂಪಿಯ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್. ಶ್ರೀನಿವಾಸ್ 2020-21ನೇ ಸಾಲಿನ ಬಜೆಟ್ ಮಂಡಿಸಿದರು.

ಈ ಬಾರಿ ಬಜೆಟ್‌ನಲ್ಲಿಸ್ಮಾರ್ಟ್ ಶಿಕ್ಷಣ, ಶುದ್ಧ ಕುಡಿಯುವ ನೀರು, ಪರಿಸರ ಸಂರಕ್ಷಣೆ ಹಾಗೂ ಮೂಲಸೌಕರ್ಯಕ್ಕೆ ಅದ್ಯತೆ.ಪ್ರತಿ ಗೃಹೋಪಯೋಗಿ ಸಂಪರ್ಕಕ್ಕೆ ತಿಂಗಳಿಗೆ 10 ಸಾವಿರ ಲೀಟರ್ ನೀರು ಪೂರೈಕೆ. ಇದಕ್ಕಾಗಿ ಬಜೆಟ್‌ನಲ್ಲಿ₹43 ಕೋಟಿ ಕಾಯ್ದಿರಿಸಲಾಗಿದೆ.ಪಾಲಿಕೆ ಕಚೇರಿ ಶಾಲಾ ಕಾಲೇಜು ಹಾಗೂ ಆಸ್ಪತ್ರೆ ಬಳಿ ಡಿಜಿಟಲ್ ಡಿಸ್‌‌ಪ್ಲೇ ₹5 ಕೋಟಿ, ಹೊಸ ಸ್ಮಶಾನ ನಿರ್ಮಾಣಕ್ಕೆ ₹10 ಕೋಟಿ,ರಾಜಕಾಲುವೆ ಸ್ವಚ್ಛತೆ ಹಾಗೂ ಪ್ರವಾಹ ತಡೆ ಕಾಮಗಾರಿಗಳಿಗೆ ₹10 ಕೋಟಿ,ಪಾಲಿಕೆ ವ್ಯಾಪ್ತಿಯ ವೃತ್ತಗಳ ಸುಂದರೀಕರಣಕ್ಕೆ ₹15 ಕೋಟಿ,ಮೇಲ್ಸೇತುವೆ, ಕೆಳಸೇತುವೆ ದುರಸ್ತಿ ಮತ್ತು ನಿರ್ವಹಣೆಗೆ ₹ 40 ಕೋಟಿ ಮೀಸಲಿಡಲಾಗಿದೆ. ರಾಜಕಾಲುವೆ ಅಭಿವೃದ್ಧಿಗೆ ₹ 200 ಕೋಟಿ ಮೀಸಲಿಡಲಾಗಿದೆ. ಇದೇ 22ರಂದು ಆಯವ್ಯಯ ಕುರಿತು ಚರ್ಚೆಗೆ ಮತ್ತೆ ಇದೇ ರೀತಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕೌನ್ಸಿಲ್ ಸಭೆ ನಡೆಸಲು ತೀರ್ಮಾನಿಸಲಾಗಿದೆ.

ಬೆರಳೆಣಿಕೆ ಮಂದಿ ಮಾತ್ರ ಕೌನ್ಸಿಲ್ ಸಭೆಯಲ್ಲಿ ಭಾಗಿ

ADVERTISEMENT

ಕೋವಿಡ್ 19 ನಿಯಂತ್ರಣ ಸಲುವಾಗಿ ಲಾಕ್‌‌ಡೌನ್ಜಾರಿಯಲ್ಲಿರುವುದರಿಂದ ಬೆರಳೆಣಿಕೆ ಮಂದಿ ಮಾತ್ರ ಕೇಂದ್ರ ಕಚೇರಿಯಲ್ಲಿ ನಡೆದ ಕೌನ್ಸಿಲ್ ಸಭೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು.

ಮೆಯರ್ ಎಂ.ಗೌತಮ್ ಕುಮಾರ್, ಉಪಮೇಯರ್ ಎಂ.ರಾಮೋಹನ್ ರಾಜು, ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಆಡಳಿತ ಪಕ್ಷದ ನಾಯಕ ಕೆ.ಎ.ಮುನೀಂದ್ರ ಕುಮಾರ್, ವಿರೋಧ ಪಕ್ಷದ ನಯಕ ಅಬ್ದುಲ್ ವಾಜಿದ್ ಜೆಡಿಎಸ್ ನಾಯಕಿ ನೇತ್ರಾ ನಾರಾಯಣ್ ಮಾಜಿ ಮೇಯರ್ ಗಳು ಮಾಜಿತ ಆಡಳಿತ ಪಕ್ಷಗಳ ನಾಯಕರಾಗಿದ್ದವರು ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಹಾಗೂ ಹಿರಿಯ ಅಧಿಕಾರಿಗಳು ಮಾತ್ರ ಬಜೆಟ್ ಮಂಡನೆ ವೇಳೆ ಕೇಂದ್ರ ಕಚೇರಿ ಸಭಾಂಗಣದಲ್ಲಿ ಹಾಜರಿದ್ದರು. ಉಳಿದ ಪಾಲಿಕೆ ಸದಸ್ಯರು ಆಯಾ ವಲಯಗಳಲ್ಲೇ ಬಜೆಟ್ ಮಂಡನೆ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಲಾಯಿತು.ಬಜೆಟ್ ಮಂಡನೆಯನ್ನು ಸಿಸ್ಕೊ ಜಾಬರ್ ತಂತ್ರಾಂಶ ಬಳಸಿ ವಿಡಿಯೊ ಕಾನ್ಫರೆನ್ಸ್ ಗೆ ಏರ್ಪಾಟು ಮಾಡಿಲಾಯಿತು.

ಮುನ್ನೆಚ್ಚರಿಕೆ: ಬಜೆಟ್ ಮಂಡನೆ ವೇಳೆ ಪಾಲಿಕೆ ಕೇಂದ್ರ ಕಚೇರಿಗೆ ಬರುವವರೂ ಸುರಕ್ಷತಾ ಕ್ರಮ ಪಾಲಿಸುವಂತೆ ಸೂಚಿಸಲಾಗಿತ್ತು. ಕೈಗಳನ್ನು ಸ್ಯಾನಿಟೈಸರ್ಗಳಿಂದ ಸ್ವಚ್ಛಗೊಳಿಸಲಾಯಿತು. ಸಭೆಗೆ ಬಂದವರ ದೇಹದ ಉಷ್ಣಾಂಶ ಪತ್ತೆಗೆ ಥರ್ಮಲ್ ಇಮೇಜ್ ಸ್ಕ್ಯಾನರ್ ಅನ್ನು ಪ್ರವೇಶ ದ್ವಾರದ ಬಳಿ ಅಳವಡಿಸಲಗಿತ್ತು.

'ಸಬ್ ಮೆರೀನ್‌ಗಳಲ್ಲಿ ಇಂಥಹದೇ ತಂತ್ರಜ್ಞಾನ ಬಳಸಲಾಗುತ್ತದೆ. ವ್ಯಕ್ತಿಯ ದೇಹದ ಉಷ್ಣಾಂಶಗಳಲ್ಲಿನ ಸಣ್ಣ ವ್ಯತ್ಯಾಸವನ್ನು ಇದು ದಾಖಲಿಸುತ್ತದೆ. ಇಲ್ಲಿಗೆ ಬರುವವರಲ್ಲಿ ಜ್ವರದ ಲಕ್ಷಣಗಳು ಕಂಡುಬಂದರೆ ಪತ್ತೆ ಹಚ್ಚಲು ನೆರವಾಗುತ್ತದೆ' ಎಂದು ಕೌನ್ಸಿಲ್ ಕಾರ್ಯದರ್ಶಿ ಮಾಹಿತಿ ನೀಡಿದರು.

ಬಜೆಟ್ ಕುರಿತು ಚರ್ಚೆಗೆ ಅವಕಾಶ ನೀಡುವಿರಾ ಎಂದು ವಿರೋಧ ಪಕ್ಷದ ನಾಯಕ ಕೇಳಿದರು.ಚರ್ಚೆಗೆ ಅವಕಾಶ ನೀಡುವುದಾಗಿ ಮೇಯರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.