ADVERTISEMENT

ಬೆಂಗಳೂರು: ಬಿಬಿಎಂಪಿಯಿಂದ ಸರಳ ಅಂಬೇಡ್ಕರ್ ಜಯಂತಿ ಆಚರಣೆ

ಪೌರಕಾರ್ಮಿಕರ ಆರೋಗ್ಯ ತಪಾಸಣೆ, ಸುರಕ್ಷತಾ ಕಿಟ್ ವಿತರಣೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2020, 11:10 IST
Last Updated 14 ಏಪ್ರಿಲ್ 2020, 11:10 IST
ಪೌರಕಾರ್ಮಿಕರಿಗೆ ಎಂ.ಗೌತಮ್ ಕುಮಾರ್ ಅವರು ಸುರಕ್ಷತಾ ಕಿಟ್ ವಿತರಿಸಿದರು. ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್, ಆಡಳಿತ ಪಕ್ಷದ ನಾಯಕ ಕೆ.ಎ.ಮುನೀಂದ್ರ ಕುಮಾರ್, ಉಪಮೇಯರ್‌ ರಾಮಮೋಹನರಾಜು ಇದ್ದಾರೆ
ಪೌರಕಾರ್ಮಿಕರಿಗೆ ಎಂ.ಗೌತಮ್ ಕುಮಾರ್ ಅವರು ಸುರಕ್ಷತಾ ಕಿಟ್ ವಿತರಿಸಿದರು. ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್, ಆಡಳಿತ ಪಕ್ಷದ ನಾಯಕ ಕೆ.ಎ.ಮುನೀಂದ್ರ ಕುಮಾರ್, ಉಪಮೇಯರ್‌ ರಾಮಮೋಹನರಾಜು ಇದ್ದಾರೆ   

ಬೆಂಗಳೂರು: ಕೋವಿಡ್-19 ಸೋಂಕು ನಿಯಂತ್ರಣ ಸಲುವಾಗಿ ನಗರದಲ್ಲಿ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಬಿಬಿಎಂಪಿ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಕೇಂದ್ರ ಕಚೇರಿಯ ಆವರಣದಲ್ಲಿ ಸರಳವಾಗಿ ಆಚರಿಸಲಾಯಿತು.

ಅಂಬೇಡ್ಕರ್ ಪ್ರತಿಮೆಗೆ ಮೇಯರ್ ಎಂ.ಗೌತಮ್ ಕುಮಾರ್ ಹಾಗೂ ಇತರ ಗಣ್ಯರು ಮಾಲಾರ್ಪಣೆ ಮಾಡಿದರು.
ಕಾರ್ಯಕ್ರಮದ ಅಂಗವಾಗಿ ಪೌರಕಾರ್ಮಿಕರಿಗೆ ಸ್ಯಾನಿಟೈಸರ್/ ಔಷಧೀಯ ಸಾಬೂನು, ಎರಡು ಜೊತೆ ಮಾಸ್ಕ್, ಒಂದು ಜೊತೆ ಕೈಗವಸು, ಒಂದು ಜೊತೆ ಶೂಗಳಿರುವ ಸ್ವಚ್ಚತಾ ಕಿಟ್‌ಗಳನ್ನು ವಿತರಿಸಲಾಯಿತು. ಪೌರಕಾರ್ಮಿಕರು ನೆಲೆಸಿರುವ ಕಾಲೊನಿಗಳಲ್ಲಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಯಿತು.

‘ಸಿಹಿತಿಂಡಿಯನ್ನು ಖರೀದಿಸಲು ಪಾಲಿಕೆಯ ಎಲ್ಲ ಪೌರಕಾರ್ಮಿಕರ ಖಾತೆಗೆ ₹ 200 ಜಮೆ ಮಾಡಲಾಗುವುದು. ಎಂಟು ವಲಯಗಳಲ್ಲಿ ಒಟ್ಟು 99 ಪೌರಕಾರ್ಮಿಕರ ಕಾಲೊನಿಗಳಿವೆ. ಪಾಲಿಕೆ ಹಾಗೂ ಬೆಂಗಳೂರು ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರ ತಂಡವು ಈ ಕಾಲೊನಿಗಳಿಗೆ ತೆರಳಿ ಆರೋಗ್ಯ ತಪಾಸಣೆ ನಡೆಸಲಿದೆ’ ಎಂದು ಮೇಯರ್ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.