ADVERTISEMENT

ಕ್ಷಮೆ ಕೋರಿದ ಬಿಬಿಎಂಪಿ ಆಯುಕ್ತ

​ಪ್ರಜಾವಾಣಿ ವಾರ್ತೆ
Published 4 ಜುಲೈ 2020, 10:41 IST
Last Updated 4 ಜುಲೈ 2020, 10:41 IST
ಮೃತ ವ್ಯಕ್ತಿಯ ಮನೆಯವರಿಗೆ ಕೈ ಮುಗಿದು ಕ್ಷಮೆ ಕೋರಿದ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್
ಮೃತ ವ್ಯಕ್ತಿಯ ಮನೆಯವರಿಗೆ ಕೈ ಮುಗಿದು ಕ್ಷಮೆ ಕೋರಿದ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್   

ಬೆಂಗಳೂರು: ಆಂಬ್ಯುಲೆನ್ಸ್‌ಗಾಗಿ ಕಾದು ಕುಳಿತು ರಸ್ತೆಯಲ್ಲೇ ಮೃತಪಟ್ಟಹನುಮಂತನಗರದ ಕೊರೊನಾ ಸೋಂಕಿತ ವ್ಯಕ್ತಿ ಮನೆಗೆ ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ಶನಿವಾರ ಭೇಟಿ ನೀಡಿ ಕುಟುಂಬದವರ ಕ್ಷಮೆ ಯಾಚಿಸಿದರು.

‘ಇಂತಹ ಘಟನೆ ನಡೆಯಬಾರದಿತ್ತು, ನಡೆದಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಪರವಾಗಿ ಕ್ಷಮೆ ಕೋರುತ್ತೇನೆ’ ಎಂದು ಕುಟುಂಬದವರನ್ನು ಸಮಾಧಾನಪಡಿಸಿದರು.

ಕೊರೊನಾ ಸೋಂಕು ತಗುಲಿರುವುದು ಶುಕ್ರವಾರ ಬೆಳಿಗ್ಗೆ ದೃಢಪಟ್ಟ ಬಳಿಕ 55 ವರ್ಷದ ವ್ಯಕ್ತಿ, ಆಂಬುಲೆನ್ಸ್‌ಗೆ ಕರೆ ಮಾಡಿ 15 ದಿನಗಳಿಗೆ ಬೇಕಾಗುವಷ್ಟು ಬಟ್ಟೆ ತುಂಬಿಕೊಂಡು ಆಸ್ಪತ್ರೆಗೆ ಸೇರಲು ಮುಂದಾದರು. ಆಂಬುಲೆನ್ಸ್‌ಗಾಗಿ ಗಂಟೆ ಗಟ್ಟಲೆ ಕಾದಿದ್ದ ಅವರು ರಸ್ತೆ ಬದಿಯೇ ಕುಸಿದು ಬಿದ್ದು ಮೃತಪಟ್ಟಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.