ಬೆಂಗಳೂರು: ಕೊರೊನಾ ಸೋಂಕಿನ ಲಕ್ಷಣ ಇದ್ದವರ ಮನೆಗಳಿಗೇ ತೆರಳಿರ‍್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆ ನಡೆಸಲು ಬಿಬಿಎಂಪಿ ಮುಂದಾಗಿದೆ.
ಇದಕ್ಕಾಗಿ ಗುತ್ತಿಗೆ ಆಧಾರದಲ್ಲಿ 232 ವಾಹನಗಳನ್ನು ಪಾಲಿಕೆ ಪಡೆದುಕೊಂಡಿದ್ದು, ವಲಯವಾರು ವಾಹನಗಳನ್ನು ಹಂಚಿಕೆ ಮಾಡಲಾಗಿದೆ. ಅವುಗಳ ಕಾರ್ಯಾಚರಣೆಗೆ ಶುಕ್ರವಾರ ಚಾಲನೆ ನೀಡಲಾಯಿತು. ಪ್ರತಿ ವಾಹನಗಳಲ್ಲಿ ಪರೀಕ್ಷೆ ನಡೆಸಲು ಮೂವರು ಸಿಬ್ಬಂದಿ ಇರಲಿದ್ದಾರೆ. ಕಂಟೈನ್‌ಮೆಂಟ್ ಪ್ರದೇಶ, ಕೊಳೆಗೇರಿ, ಪೌರ ಕಾರ್ಮಿಕರ ಬಡಾವಣೆಗಳಲ್ಲಿ ಈ ಪರೀಕ್ಷೆ ನಡೆಸಲಾಗುವುದು ಎಂದು ಪಾಲಿಕೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.