ADVERTISEMENT

ಸರ್ವಜ್ಞನಗರ: ಕೋವಿಡ್ ವಾರ್‌ರೂಮ್‌ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2020, 19:57 IST
Last Updated 22 ಜುಲೈ 2020, 19:57 IST
ಮಾರುತಿ ಸೇವಾ ನಗರದಲ್ಲಿ ಸಚಿವ ವಿ ಸೋಮಣ್ಣ ಕೋವಿಡ್ ವಾರ್ ರೂಮ್ ಉದ್ಘಾಟಿಸಿದರು. ಸಂಸದ ಪಿ.ಸಿ.ಮೋಹನ್, ಶಾಸಕ ಕೆ.ಜೆ‌.ಜಾರ್ಜ್‌, ವಿಧಾನ ಪರಿಷತ್ ಸದಸ್ಯ ಎಚ್.ಎಂ.ರಮೇಶ್ ಗೌಡ, ಪಾಲಿಕೆ ಸದಸ್ಯ ಪದ್ಮನಾಭ ರೆಡ್ಡಿ ಇದ್ದರು
ಮಾರುತಿ ಸೇವಾ ನಗರದಲ್ಲಿ ಸಚಿವ ವಿ ಸೋಮಣ್ಣ ಕೋವಿಡ್ ವಾರ್ ರೂಮ್ ಉದ್ಘಾಟಿಸಿದರು. ಸಂಸದ ಪಿ.ಸಿ.ಮೋಹನ್, ಶಾಸಕ ಕೆ.ಜೆ‌.ಜಾರ್ಜ್‌, ವಿಧಾನ ಪರಿಷತ್ ಸದಸ್ಯ ಎಚ್.ಎಂ.ರಮೇಶ್ ಗೌಡ, ಪಾಲಿಕೆ ಸದಸ್ಯ ಪದ್ಮನಾಭ ರೆಡ್ಡಿ ಇದ್ದರು   

ಕೆ.ಆರ್.ಪುರ: ‘ಕೊರೊನಾದಿಂದ ಪಾರಾಗಲು ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಅನುಸರಿಸುತ್ತಿದೆ. ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತು ಪಕ್ಷಾತೀತವಾಗಿ ಹೋರಾಟ ಮಾಡಬೇಕಾಗಿದೆ’ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.

ಬಿಬಿಎಂಪಿ ವತಿಯಿಂದ ಸರ್ವಜ್ಞನಗರ ಕ್ಷೇತ್ರದ ಮಾರುತಿ ಸೇವಾ ನಗರದಲ್ಲಿ ಮಂಗಳವಾರ ಕೋವಿಡ್ ವಾರ್ ರೂಮ್ ಉದ್ಘಾಟಿಸಿ ಮಾತನಾಡಿದರು.

’ಕೋವಿಡ್ ನಿಯಂತ್ರಣ ಮಾಡಲು ನಾಳೆಯಿಂದ ವಲಯವಾರು ಸಭೆ ಆರಂಭಿಸಲಾಗುವುದು. ಶಾಸಕರು, ಸಂಸದರು ಮತ್ತು ಜಂಟಿ ಆಯುಕ್ತರ ಜೊತೆಯಲ್ಲಿ ಕೋವಿಡ್ ನಿಯಂತ್ರಣ ಮಾಡುವ ಕುರಿತು ಚರ್ಚಿಸಲಾಗುವುದು’ ಎಂದು ಅವರು ತಿಳಿಸಿದರು.

ADVERTISEMENT

’ಬೌರಿಂಗ್ ಆಸ್ಪತ್ರೆಯು ಒಟ್ಟು 650 ಕ್ಕೂ ಹೆಚ್ಚು ಬೆಡ್‌ಗಳನ್ನು ಹೊಂದಿದ್ದು, 250 ಬೆಡ್‌ಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಡಲಾಗಿದೆ. ಇದರಲ್ಲಿ 150 ಆಕ್ಸಿಜನ್ ಸಹಿತ ಬೆಡ್ ಗಳು ಸೇರಿವೆ‘ ಎಂದರು.

’ಸರ್ವಜ್ಞನಗರ ಕ್ಷೇತ್ರದ ಎಂಟು ವಾರ್ಡ್‌ಗಳ ಅನುಕೂಲಕ್ಕಾಗಿ ವಾರ್ ರೂಮ್ ಸ್ಥಾಪಿಸಲಾಗಿದೆ. ಸಾರ್ವಜನಿಕರು ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆ ಪರಿಹರಿಸಿಕೊಳ್ಳಬಹುದು‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.