ADVERTISEMENT

ಹಜ್‌ ಭವನ ಸಿಸಿಸಿ: 30 ಮಂದಿ ದಾಖಲು

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 18:32 IST
Last Updated 28 ಮಾರ್ಚ್ 2021, 18:32 IST
ಹಜ್‌ ಭವನದ ಕೋವಿಡ್‌ ಆರೈಕೆ ಕೇಂದ್ರದಲ್ಲಿರುವ ಸಿಬ್ಬಂದಿ
ಹಜ್‌ ಭವನದ ಕೋವಿಡ್‌ ಆರೈಕೆ ಕೇಂದ್ರದಲ್ಲಿರುವ ಸಿಬ್ಬಂದಿ   

ಬೆಂಗಳೂರು: ನಗರದ ಹಜ್‌ಭವನದಲ್ಲಿ ತೆರೆಯಲಾಗಿರುವ ಕೋವಿಡ್‌ ಆರೈಕೆ ಕೇಂದ್ರದಲ್ಲಿ (ಸಿಸಿಸಿ) ಭಾನುವಾರ 30 ಜನ ದಾಖಲಾಗಿದ್ದಾರೆ. ಇವರೆಲ್ಲರೂ ಕೊರೊನಾ ಸೋಂಕಿನ ಸೌಮ್ಯ ಲಕ್ಷಣ ಹೊಂದಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ನಗರದ ಹಜ್‌ಭವನ ಸೇರಿದಂತೆ ಮೂರು ಕೋವಿಡ್ ಆರೈಕೆ ಕೇಂದ್ರವನ್ನು ಪಾಲಿಕೆ ಮತ್ತೆ ಪ್ರಾರಂಭಿಸಿದೆ.

ಈವರೆಗೆ, ಬಹುತೇಕ ಜನರು ಕೋವಿಡ್ ಆರೈಕೆ ಕೇಂದ್ರಕ್ಕೆ ಬರದೆ ಮನೆಗಳಲ್ಲೇ ಐಸೋಲೇಷನ್‌ನಲ್ಲಿ ಇರುತ್ತಿದ್ದರು. ಹೋಂ ಐಸೋಲೇಷನ್ ಆಗಲು ಅವಕಾಶ ಇಲ್ಲದೆ ಇರುವವರಿಗೆ ಹಾಗೂ ಕೊರೊನಾ ಸೋಂಕಿನ ತೀವ್ರ ಲಕ್ಷಣ ಇಲ್ಲದವರಿಗೆ ಕೋವಿಡ್ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ADVERTISEMENT

ಮಾ.28ರಂದು ಹಜ್‌ಭವನದ ಈ ಕೇಂದ್ರದಲ್ಲಿ 22 ಪುರುಷರು, 8 ಮಹಿಳೆಯರು ದಾಖಲಾಗಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.