ADVERTISEMENT

ಬೆಂಗಳೂರು: ಬಿಬಿಎಂಪಿ ಆಸ್ಪತ್ರೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2023, 4:54 IST
Last Updated 25 ಮಾರ್ಚ್ 2023, 4:54 IST
ಬಸವನಗುಡಿಯ ಕತ್ರಿಗುಪ್ಪೆ ವಾರ್ಡ್‌ನಲ್ಲಿ ಆಸ್ಪತ್ರೆ ಕಟ್ಟಡವನ್ನು ಶಾಸಕ ರವಿಸುಬ್ರಮಣ್ಯ ಉದ್ಘಾಟಿಸಿದರು. ವಲಯ ಆಯುಕ್ತ ಜಯರಾಮ್ ರಾಯಪುರ, ಸಂಸದ ತೇಜಸ್ವಿ ಸೂರ್ಯ ಇದ್ದರು
ಬಸವನಗುಡಿಯ ಕತ್ರಿಗುಪ್ಪೆ ವಾರ್ಡ್‌ನಲ್ಲಿ ಆಸ್ಪತ್ರೆ ಕಟ್ಟಡವನ್ನು ಶಾಸಕ ರವಿಸುಬ್ರಮಣ್ಯ ಉದ್ಘಾಟಿಸಿದರು. ವಲಯ ಆಯುಕ್ತ ಜಯರಾಮ್ ರಾಯಪುರ, ಸಂಸದ ತೇಜಸ್ವಿ ಸೂರ್ಯ ಇದ್ದರು   

ಬೆಂಗಳೂರು: ಬಸವನಗುಡಿ ಹಾಗೂ ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರಗಳಲ್ಲಿ ಬಿಬಿಎಂಪಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಚಾಲನೆ ನೀಡಲಾಯಿತು.

ಬಸವನಗುಡಿಯ ಕತ್ರಿಗುಪ್ಪೆ ವಾರ್ಡ್‌ನಲ್ಲಿ ಆಸ್ಪತ್ರೆ ಕಟ್ಟಡ, ಬಸವನಗುಡಿ ವಾರ್ಡ್‌ನ ಅಶೋಕ ನಗರದಲ್ಲಿ ಪ್ರೌಢಶಾಲೆ, ಸರ್ಕಾರಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆ, ಹನುಮಂತನಗರ ವಾರ್ಡ್‌ನಲ್ಲಿ ಸಮುದಾಯ ಭವನ ಹಾಗೂ ದೋಭಿಘಾಟ್ ಒಳಗಿನ ಚಾವಣಿಯನ್ನು ಶಾಸಕ ರವಿಸುಬ್ರಮಣ್ಯ ಉದ್ಘಾಟಿಸಿದರು.

ಕತ್ರಿಗುಪ್ಪೆಯಲ್ಲಿ 30 ಹಾಸಿಗೆಯ ಆಸ್ಪತ್ರೆ ಕಟ್ಟಡವನ್ನು ನವ ನಗರೋತ್ಥಾನ ಅನುದಾನದಲ್ಲಿ ₹3 ಕೋಟಿ ಹಾಗೂ ಬಿಬಿಎಂಪಿಯ ₹5.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸಂಸದ ತೇಜಸ್ವಿ ಸೂರ್ಯ, ವಲಯ ಆಯುಕ್ತ ಜಯರಾಮ್ ರಾಯಪುರ ಇದ್ದರು.

ADVERTISEMENT

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿದ್ದಯ್ಯ ರಸ್ತೆಯಲ್ಲಿ ರೆಫೆರಲ್ ಆಸ್ಪತ್ರೆಯನ್ನು ಶಾಸಕ ಉದಯ್ ಬಿ. ಗರುಡಾಚಾರ್
ಉದ್ಘಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.