ADVERTISEMENT

ದೋಷಪೂರಿತ ರಾಷ್ಟ್ರಧ್ವಜ ಹಿಂದಿರುಗಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2022, 21:30 IST
Last Updated 5 ಆಗಸ್ಟ್ 2022, 21:30 IST
   

ಬೆಂಗಳೂರು: ದೋಷಪೂರಿತ ರಾಷ್ಟ್ರಧ್ವಜಗಳನ್ನು ಮಾರಾಟ ಮಾಡಬಾರದು ಎಂದು ಬಿಬಿಎಂಪಿ ಸಿಬ್ಬಂದಿಗೆ ಆಡಳಿತ ವಿಭಾಗದ ವಿಶೇಷ ಆಯುಕ್ತ ರಂಗಪ್ಪ ಸೂಚನೆ ನೀಡಿದ್ದಾರೆ.

ಸರಿಯಾದ ರೀತಿಯಲ್ಲಿರದ ರಾಷ್ಟ್ರಧ್ವಜಗಳನ್ನು ನಾಗರಿಕರು ಪಡೆದಿದ್ದರೆ ಅವುಗಳನ್ನು ಬಿಬಿಎಂಪಿಯ ಯಾವುದೇ ಕಚೇರಿಗಳಲ್ಲಿ ಹಿಂದಿರುಗಿಸಿ, ಸರಿಯಾದ ರಾಷ್ಟ್ರಧ್ವಜಗಳನ್ನುಪಡೆಯಬಹುದು ಎಂದು ತಿಳಿಸಿದ್ದಾರೆ.

ಇನ್ನು ಮುಂದೆ ರಾಷ್ಟ್ರಧ್ವಜಗಳನ್ನು ಪಡೆಯುವಾಗ ಸರಿಯಾದ ರೀತಿಯಲ್ಲಿ ಇರುವುದನ್ನು ಖಾತರಿಪಡಿಸಿಕೊಂಡು ಪಡೆಯಲು ನಾಗರಿಕರಲ್ಲಿ ಅವರು ವಿನಂತಿ ಮಾಡಿದ್ದಾರೆ.

ADVERTISEMENT

ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 13ರಿಂದ 15ರವರೆಗೆ ನಡೆಯಲಿರುವ ‘ಪ್ರತಿ ಮನೆಯಲ್ಲಿ ರಾಷ್ಟ್ರ ಧ್ವಜ’ ಅಭಿಯಾನಕ್ಕಾಗಿ ಬಿಬಿಎಂಪಿ 10 ಲಕ್ಷ ರಾಷ್ಟ್ರಧ್ವಜಗಳನ್ನು ನಾಗರಿಕರಿಗೆ ವಿತರಿಸುತ್ತಿದೆ. ವಲಯದ ಜಂಟಿ ಆಯುಕ್ತರ ಕಚೇರಿ, ವಾರ್ಡ್‌ ಕಚೇರಿಗಳು, ಪ್ರಮುಖ ಜನನಿಬಿಡ ಪ್ರದೇಶಗಳು, ಮಾಲ್‌ಗಳಲ್ಲಿ ರಾಷ್ಟ್ರಧ್ವಜಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.