
ಪ್ರಜಾವಾಣಿ ವಾರ್ತೆಬೆಂಗಳೂರು: ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಸದ 60 ವಾಣಿಜ್ಯ ಕಟ್ಟಡಗಳಿಗೆ ಶನಿವಾರ ಬೀಗಮುದ್ರೆ ಹಾಕಲಾಗಿದೆ.
ಕೆ.ಆರ್ ಪುರ ವಲಯ ವ್ಯಾಪ್ತಿಯಲ್ಲಿನ ಬಹು ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸದೆ ಬಾಕಿದಾರರಾಗಿದ್ದ ವಾಣಿಜ್ಯ ಕಟ್ಟಡಗಳಿಗೆ ವಲಯ ಜಂಟಿ ಆಯುಕ್ತೆ ಸುಧಾ ನೇತೃತ್ವದಲ್ಲಿ ಕಂದಾಯ ವಸೂಲಾತಿ ತಂಡವು ಬೀಗ ಮುದ್ರೆ ಹಾಕಿದೆ ಎಂದು ಆಯುಕ್ತ ಡಿ. ಎಸ್. ರಮೇಶ್ ತಿಳಿಸಿದರು.
ಕಂದಾಯ ವಸೂಲಾತಿ ಸೀಲಿಂಗ್ ಕಾರ್ಯಾಚರಣೆಯಲ್ಲಿ 76 ಕಟ್ಟಡಗಳನ್ನು ಪರಿಶೀಲಿಸಲಾಗಿದ್ದು, ಆ ಪೈಕಿ 16 ಸ್ವತ್ತುಗಳ ಆಸ್ತಿ ಮಾಲಿಕರು ಸ್ಥಳದಲ್ಲಿ ಬಾಕಿ ಆಸ್ತಿ ತೆರಿಗೆ ಪಾವತಿಸಿದರು. ಇನ್ನುಳಿದ 60 ಸ್ವತ್ತುಗಳಿಗೆ ಬೀಗ ಹಾಕುವ ಮೂಲಕ ಸ್ವತ್ತಿನ ಮಾಲೀಕರಿಂದ ಬಾಕಿ ಆಸ್ತಿ ತೆರಿಗೆ ವಸೂಲಾತಿಗೆ ಕ್ರಮವಹಿಸಲಾ
ಗಿದೆ ಎಂದು ಆಯುಕ್ತರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.