ADVERTISEMENT

ಕೋವಿಡ್‌: 6 ಕ್ಷೇತ್ರಗಳಲ್ಲಿ 300ಕ್ಕೂ ಅಧಿಕ ಪ್ರಕರಣ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 16:01 IST
Last Updated 9 ಆಗಸ್ಟ್ 2021, 16:01 IST

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಕೋವಿಡ್‌ ಸಕ್ರಿಯ ಪ್ರಕರಣಗಳ ಸಂಖ್ಯೆ 300ಕ್ಕೂ ಹೆಚ್ಚು ಇದೆ. ಒಟ್ಟು 103 ವಾರ್ಡ್‌ಗಳಲ್ಲಿ 10ಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳಿವೆ.

ನಗರದಲ್ಲಿ ಕೋವಿಡ್ ಪರೀಕ್ಷೆಗೊಳಗಾದವರಲ್ಲಿ ಸೋಂಕು ಪತ್ತೆ ದರ 0.63ಕ್ಕೆ ಹಾಗೂ ಸೋಂಕಿತರ ಸಾವಿನ ದರ 1.09ಕ್ಕೆ ಇಳಿಕೆಯಾಗಿದೆ.

ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ನಗರದಲ್ಲಿ ಒಟ್ಟು 160 ಕಂಟೈನ್‌ಮೆಂಟ್‌ ವಲಯಗಳನ್ನು ಗುರುತಿಸಲಾಗಿದೆ. ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ 79ಕಂಟೈನ್‌ಮೆಂಟ್‌ ವಲಯಗಳಿವೆ. 70 ಒಂಟಿ ಮನೆಗಳು, ಒಂದು ಶಾಲೆ, ಎಂಟು ಪಿ.ಜಿ ಅಥವಾ ವಿದ್ಯಾರ್ಥಿನಿಲಯಗಳು ಹಾಗೂ ಎರಡು ಇತರ ಪ್ರದೇಶಗಳನ್ನು ಕಂಟೈನ್‌ಮೆಂಟ್‌ ವಲಯಗಳನ್ನಾಗಿ ಗುರುತಿಸಲಾಗಿದೆ. ಇವುಗಳಲ್ಲಿ ಒಟ್ಟು 648 ಕೋವಿಡ್‌ ಸಕ್ರಿಯ ಪ್ರಕರಣಗಳಿವೆ.

ADVERTISEMENT

ಕಂಟೈನ್‌ಮೆಂಟ್‌ ವಲಯಗಳನ್ನು ಅತಿ ಹೆಚ್ಚಿನ ಸಂಖ್ಯೆಯಲ್ಲಿ (42) ಗುರುತಿಸಿರುವುದು ಮಹದೇವಪುರ ವಲಯದಲ್ಲಿ. ಈ ವಲಯದ ಕಂಟೈನ್‌ಮೆಂಟ್‌ ವಲಯಗಳಲ್ಲಿ ಒಟ್ಟು 186 ಕೋವಿಡ್‌ ಪ್ರಕರಣಗಳಿವೆ.

300ಕ್ಕಿಂತ ಹೆಚ್ಚು ಕೋವಿಡ್‌ ಪ್ರಕರಣಗಳಿರುವ ಕ್ಷೇತ್ರಗಳು

ಕ್ಷೇತ್ರ; ಸಕ್ರಿಯ ಪ್ರಕರಣ; ಸೊಂಕು ಪತ್ತೆ ದರ (ಶೇ)

ಮಹದೇವಪುರ; 501; 1.10

ಆರ್‌.ಆರ್‌.ನಗರ; 426; 0.44

ಕೆ.ಆರ್‌.ಪುರ; 424; 0.10

ಬ್ಯಾಟರಾಯನಪುರ;385; 0.94


ಬೆಂಗಳೂರು ದಕ್ಷಿಣ;357; 0.74


ಬೊಮ್ಮನಹಳ್ಳಿ; 356; 0.92

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.