ADVERTISEMENT

ಬಿಬಿಎಂಪಿ: ವಿಶೇಷ ಆಯುಕ್ತರಿಗೆ ತಲಾ ಎರಡು ವಲಯಗಳ ಉಸ್ತುವಾರಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2019, 20:07 IST
Last Updated 26 ಸೆಪ್ಟೆಂಬರ್ 2019, 20:07 IST
   

ಬೆಂಗಳೂರು: ಬಿಬಿಎಂಪಿಯ 8 ವಲಯಗಳಲ್ಲಿ ಆಡಳಿತ ಸುಗಮಗೊಳಿಸಲು ನಾಲ್ವರು ವಿಶೇಷ ಆಯುಕ್ತರಿಗೆ ತಲಾ ಎರಡು ವಲಯಗಳ ಉಸ್ತುವಾರಿ ಹೊಣೆ ನೀಡಿ ಆಯುಕ್ತ ಬಿ.ಎಚ್‌. ಅನಿಲ್‌ ಕುಮಾರ್‌ ಆದೇಶ ಹೊರಡಿಸಿದ್ದಾರೆ.

ವಿಶೇಷ ಆಯುಕ್ತ (ಯೋಜನೆ) ರವಿಕುಮಾರ್‌ ಸುರಪೂರ ಅವರಿಗೆ ಪೂರ್ವ ಮತ್ತು ಯಲಹಂಕ, ವಿಶೇಷ ಆಯುಕ್ತ (ಹಣಕಾಸು ಮತ್ತು ಮಾಹಿತಿ ತಂತ್ರಜ್ಞಾನ) ಎಂ. ಲೋಕೇಶ ಅವರಿಗೆ ದಕ್ಷಿಣ ಮತ್ತು ರಾಜರಾಜೇಶ್ವರಿನಗರ, ವಿಶೇಷ ಆಯುಕ್ತ (ಆಡಳಿತ) ವಿ. ಅನ್ಬುಕುಮಾರ್ ಅವರಿಗೆ ಪಶ್ಚಿಮ ಮತ್ತು ದಾಸರಹಳ್ಳಿ ವಲಯ, ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಡಿ.ರಂದೀಪ್ ಅವರಿಗೆ ಮಹದೇವಪುರ ಮತ್ತು ಬೊಮ್ಮನಹಳ್ಳಿ ವಲಯಗಳ ಉಸ್ತುವಾರಿ ವಹಿಸಲಾಗಿದೆ.

ಉಸ್ತುವಾರಿ ವಹಿಸಿರುವ ಎರಡು ವಲಯಗಳಿಗೆ ಸೀಮಿತವಾಗಿ ಕಾಮಗಾರಿ, ಘನತ್ಯಾಜ್ಯ ನಿರ್ವಹಣೆ, ತೋಟಗಾರಿಕೆ, ವಿದ್ಯುತ್, ವಲಯ ಯೋಜನೆ, ಗೃಹ ನಿರ್ಮಾಣ, ವಲಯ ನಗರ ಯೋಜನೆ, ಆಸ್ತಿಗಳ ನಿರ್ವಹಣೆ, ಕಲ್ಯಾಣ, ಶಿಕ್ಷಣ, ಅರಣ್ಯ, ಆರೋಗ್ಯ ವಿಷಯಗಳಲ್ಲಿ ಆಯುಕ್ತರಿಗೆ ಇದ್ದ ಅಧಿಕಾರವನ್ನು ಈ ಅಧಿಕಾರಿಗಳು ಚಲಾಯಿಸಬಹುದು.

ADVERTISEMENT

‘ಆಸ್ತಿ ತೆರಿಗೆ ಸಂಗ್ರಹ, ಕಂದಾಯ ಮತ್ತು ಜಾಹೀರಾತು ಮೂಲಗಳ ಆದಾಯ ಕ್ರೋಡೀಕರಣ ಜವಾಬ್ದಾರಿ ಕೂಡ ಅವರ ಮೇಲೆಯೇ ಇರಲಿದೆ. ಸದ್ಯ ತಾತ್ಕಾಲಿಕ ಆದೇಶ ಹೊರಡಿಸಲಾಗಿದ್ದು, ಒಂದು ತಿಂಗಳ ಕಾರ್ಯನಿರ್ವಹಣೆ ಬಳಿಕ ಬದಲಾವಣೆ, ಸುಧಾರಣೆ ಅವಶ್ಯಕತೆ ಇದ್ದಲ್ಲಿ ವಿವರವಾದ ಆದೇಶ ಹೊರಡಿಸಲಾಗುವುದು’ ಎಂದು ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.