ಬಿಡಿಎ ನಿರ್ಮಿಸುತ್ತಿರುವ ಬಡಾವಣೆ
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) 133 ಮೂಲೆ ನಿವೇಶನಗಳನ್ನು ಇ-ಹರಾಜು ಮೂಲಕ ಮಾರಾಟಕ್ಕೆ ಇಟ್ಟಿದೆ. ಇ ಹರಾಜಿನಲ್ಲಿ ಭಾಗವಹಿಸಲು ಜುಲೈ 19 ಕೊನೆ ದಿನ.
ಜುಲೈ 21ರಿಂದಲೇ ಇ-ಹರಾಜು ಪ್ರಕ್ರಿಯೆ ಆರಂಭಗೊಂಡಿದೆ. ಅಂಜನಾಪುರ ಟೌನ್‌ಶಿಪ್, ಜೆ.ಪಿ. ನಗರ 9ನೇ ಹಂತ, ಸರ್ ಎಂ. ವಿಶ್ವೇಶ್ವರಯ್ಯ , ಬಿಟಿಎಂ 4ನೇ ಹಂತ, ಬನಶಂಕರಿ 3ನೇ ಹಂತ, ನಾಗರಬಾವಿ 2ನೇ ಹಂತ, ಎಚ್‌ಬಿಆರ್ 1ನೇ ಹಂತ, 2ನೇ ಬ್ಲಾಕ್, ಆಸ್ಟಿನ್ ಟೌನ್, ಅಂಜನಾಪುರ ಟೌನ್‌ಶಿಪ್, ಜಕ್ಕೂರಿನ ಅರ್ಕಾವತಿ ಬಡಾವಣೆಯ 7ನೇ ಬ್ಲಾಕ್ ಸೇರಿ ಇತರೆಡೆ ಮೂಲೆ ನಿವೇಶನಗಳನ್ನು ಗುರುತಿಸಲಾಗಿದೆ.
ನಿವೇಶನಗಳು 600 ಚದರ ಅಡಿಗಳಿಂದ ಸುಮಾರು 4,500 ಚದರ ಅಡಿಗಳವರೆಗೆ ಇವೆ. ಆಸಕ್ತರು ಬಿಡಿಎ ವೆಬ್‌ಸೈಟ್‌ನಲ್ಲಿ ಹೆಚ್ಚಿನ ವಿವರಗಳನ್ನು ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.