ADVERTISEMENT

ʼಬ್ಯೂಟಿ ಎಕ್ಸ್‌ಪೀರಿಯೆನ್ಸ್‌ಗೆ ನೇಹಾ ಚಾಲನೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2025, 19:31 IST
Last Updated 13 ಜೂನ್ 2025, 19:31 IST
ಬ್ಯಾಟರಾಯನಪುರದಲ್ಲಿರುವ ಫೀನಿಕ್ಸ್‌ ಮಾಲ್‌ ಆಫ್ ಏಷ್ಯಾದಲ್ಲಿ ಆಯೋಜಿಸಿರುವ ಮೂರುದಿನಗಳ ʼಬ್ಯೂಟಿ ಎಕ್ಸ್‌ಪೀರಿಯೆನ್ಸ್-2025ʼ ಆಚರಣೆಗೆ ಬಾಲಿವುಡ್‌ ನಟಿ ನೇಹಾ ಶರ್ಮ ಚಾಲನೆನೀಡಿ ಮಾತನಾಡಿದರು.
ಬ್ಯಾಟರಾಯನಪುರದಲ್ಲಿರುವ ಫೀನಿಕ್ಸ್‌ ಮಾಲ್‌ ಆಫ್ ಏಷ್ಯಾದಲ್ಲಿ ಆಯೋಜಿಸಿರುವ ಮೂರುದಿನಗಳ ʼಬ್ಯೂಟಿ ಎಕ್ಸ್‌ಪೀರಿಯೆನ್ಸ್-2025ʼ ಆಚರಣೆಗೆ ಬಾಲಿವುಡ್‌ ನಟಿ ನೇಹಾ ಶರ್ಮ ಚಾಲನೆನೀಡಿ ಮಾತನಾಡಿದರು.   

ಯಲಹಂಕ: ಬೆಂಗಳೂರು ನಗರದ ಸೌಂದರ್ಯ ಪ್ರಿಯರಿಗಾಗಿ ಬ್ಯಾಟರಾಯನಪುರದಲ್ಲಿರುವ ಫೀನಿಕ್ಸ್‌ ಮಾಲ್‌ ಆಫ್ ಏಷ್ಯಾದಲ್ಲಿ ಆಯೋಜಿಸಿರುವ ಮೂರು ದಿನಗಳ ʼಬ್ಯೂಟಿ ಎಕ್ಸ್‌ಪೀರಿಯೆನ್ಸ್-2025ʼ ಉತ್ಸವಕ್ಕೆ ಬಾಲಿವುಡ್‌ ನಟಿ ನೇಹಾ ಶರ್ಮಾ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಸೌಂದರ್ಯ ಎಂಬುದು ವೈಯಕ್ತಿಕ ವಿಚಾರವಾಗಿದ್ದು, ಇದಕ್ಕೆ ಬ್ಯೂಟಿ ಎಕ್ಸ್‌ಪೀರಿಯೆನ್ಸ್‌ ಉತ್ಸವ ಆಯೋಜಿಸುವ ಮೂಲಕ ಉತ್ತಮ ವೇದಿಕೆಯನ್ನು ಕಲ್ಪಿಸಿದೆ. ಸೌಂದರ್ಯದ ಬೆರಗುಗಣ್ಣುಗಳ ಮೂಲಕ ಸೃಜನಶೀಲತೆ, ಆತ್ಮವಿಶ್ವಾಸ ಮತ್ತು ವ್ಯಕ್ತಿತ್ವವನ್ನು ಜೀವಂತಗೊಳಿಸುವ ತಾಣವಾಗಿದೆ. ಜಾಗತಿಕ ಮಟ್ಟದ ಶ್ರೇಷ್ಟತೆಯನ್ನು ವೈಯಕ್ತಿಕ ಅಭಿವ್ಯಕ್ತಿಯೊಂದಿಗೆ ಒಟ್ಟಿಗೆ ತರುವ ಆಚರಣೆಯ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆ ಎನಿಸುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರೂಪದರ್ಶಿಯರು ಫೀನಿಕ್ಸ್‌ ಮಾಲ್‌ ಆಫ್ ಏಷ್ಯಾದಲ್ಲಿರುವ ಬ್ಯೂಟಿ ಬ್ರಾಂಡ್‌ ಮಳಿಗೆಗಳಿಗೆ ಭೇಟಿ ನೀಡಿ ವಿವಿಧ ಉತ್ಪನ್ನಗಳನ್ನು ವೀಕ್ಷಿಸಿದರು. ಇದೇ ವೇಳೆ ಕ್ಯುರೆಟ್‌ ಮಾಡಲಾದ ಆಯ್ದ ಐಕಾನಿಕ್‌ ಬ್ರಾಂಡ್‌ಗಳ ಕೆಲವು ಉತ್ಪನ್ನಗಳನ್ನು ಬಿಡುಗಡೆಗೊಳಿಸಲಾಯಿತು.

ADVERTISEMENT

ಈ ಪ್ರದರ್ಶನವು ಬ್ಯೂಟಿ ಉತ್ಸಾಹಿಗಳು, ವೃತ್ತಿಪರರು ಹಾಗೂ ಟ್ರೆಂಡ್‌ ಸೆಟರ್‌ಗಳನ್ನು ಆಕರ್ಷಿಸುತ್ತಿದ್ದು, ಶನಿವಾರ ಮೇಕಪ್‌ ಪರಿಣತರಾದ ಸಂಧ್ಯಾಶೇಖರ್‌ ಮತ್ತು ಭಾನುವಾರ ಬ್ಯೂಟಿ ತಜ್ಞೆ ಭೂಮಿಕಾ ಬಾಹ್ಲ್‌ ಅವರು ಸೌಂದರ್ಯದ ಬಗ್ಗೆ ಪ್ರಾತ್ಯಕ್ಷಿಕೆಗಳ ಮೂಲಕ ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.