ADVERTISEMENT

ಬಿಬಿಎಂಪಿ ಮೀಸಲಾತಿ ಕಾಲಾವಕಾಶ ಕೋರಿ ಅರ್ಜಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2022, 2:09 IST
Last Updated 23 ನವೆಂಬರ್ 2022, 2:09 IST
   

ಬೆಂಗಳೂರು: ಬಿಬಿಎಂಪಿಯ ವಾರ್ಡ್‌ಗಳಿಗೆ ಮೀಸಲಾತಿಯನ್ನು ನಿಗದಿಪಡಿಸಲು ಮೂರು ತಿಂಗಳು ಕಾಲಾವಕಾಶ ನೀಡಬೇಕು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದೆ.

ಡಿಸೆಂಬರ್‌ 30ರೊಳಗೆ ಬಿಬಿಎಂಪಿಗೆ ಚುನಾವಣೆ ನಡೆಸಬೇಕು ಎಂದು ರಾಜ್ಯ ಚುನಾವಣೆ ಆಯೋಗಕ್ಕೆ ಹೈಕೋರ್ಟ್‌ ಸೆ.30ರಂದು ಸೂಚನೆ ನೀಡಿತ್ತು. ಜತೆಗೆ, ನ.30ರೊಳಗೆ ಮೀಸಲಾತಿ ಹೊರಡಿಸುವಂತೆ ಸರ್ಕಾರಕ್ಕೆ ಆದೇಶಿಸಿತ್ತು.

ರಾಜ್ಯ ಸರ್ಕಾರದ ಅಡ್ವೊಕೇಟ್‌ ಜನರಲ್‌ ಅವರು ಮಂಗಳವಾರ ಹೈಕೋರ್ಟ್‌ಗೆ ಕಾಲಾವಕಾಶ ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.

ADVERTISEMENT

‘ಹೈಕೋರ್ಟ್‌ ಅವಲೋಕಿಸಿದಂತೆ ಕೆಲವು ವಿಷಯಗಳ ಬಗೆಗಿನ ವರದಿಯನ್ನು ಮರು ವಿಮರ್ಶಿಸಲು ನ್ಯಾಯಮೂರ್ತಿ ಕೆ. ಭಕ್ತವತ್ಸಲ ಆಯೋಗ ಹೆಚ್ಚುವರಿ ಸಮಯವನ್ನು ಕೇಳಿದೆ. ಕೋರ್ಟ್‌ ಆದೇಶದಂತೆ ಸರ್ಕಾರ ಮಹಿಳಾ ಮೀಸಲಾತಿಯನ್ನು ಮತ್ತೆ ನಿರ್ಧರಿಸಲು ಕೆಲವು ಪ್ರಕ್ರಿಯೆ ನಡೆಸಿದೆ. ಆಯೋಗಕ್ಕೆ ಹೆಚ್ಚಿನ ಸಮಯ ಬೇಕಿರುವುದರಿಂದ ಮೀಸಲಾತಿ ಪ್ರಕಟಿಸಲು ಕಾಲಾವಕಾಶ ಬೇಕು’ ಎಂದು ಮಧ್ಯಂತರ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.