ADVERTISEMENT

ಬೆಂಗಳೂರು ಕೇಂದ್ರ ನಗರ ಪಾಲಿಕೆಯಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯಕ್ಕೆ ವೇಗ: ಚೋಳನ್

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 14:56 IST
Last Updated 28 ಸೆಪ್ಟೆಂಬರ್ 2025, 14:56 IST
<div class="paragraphs"><p>ಸ್ವಚ್ಛತಾ ಕಾರ್ಯ</p></div>

ಸ್ವಚ್ಛತಾ ಕಾರ್ಯ

   

ಬೆಂಗಳೂರು: ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನೈರ್ಮಲ್ಯವನ್ನು ಕಾಪಾಡಲು ಸಾಮೂಹಿಕ ಸ್ವಚ್ಛತಾ ಕಾರ್ಯಕ್ಕೆ ವೇಗ ನೀಡಬೇಕು ಎಂದು ಕೇಂದ್ರ ನಗರಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಅವರು ಸೂಚಿಸಿದರು.

ನಿರಂತರ ಸ್ಥಳ ತಪಾಸಣೆಯ ಪರಿಣಾಮವಾಗಿ ಕೇಂದ್ರ ನಗರಪಾಲಿಕೆ ವ್ಯಾಪ್ತಿಯಲ್ಲಿ ಅಧಿಕಾರಿಗಳು ಘನ ತ್ಯಾಜ್ಯ ಸಮರ್ಪಕ ನಿರ್ವಹಣೆ, ತ್ಯಾಜ್ಯ ಸಾಗಾಟ, ಸಾಮೂಹಿಕ ಸ್ವಚ್ಛತಾ ಕಾರ್ಯಗಳು, ರಸ್ತೆ ಮತ್ತು ಪಾದಚಾರಿಗಳ ಮೇಲಿನ ಕಟ್ಟಡಗಳ ತ್ಯಾಜ್ಯ ತೆರವು, ತ್ಯಾಜ್ಯ ಹಾಟ್‌ ಸ್ಪಾಟ್‌ ಗಳ ತೆರವು, ಸೈಡ್ ಡ್ರೈನ್ ಗಳ ಸ್ವಚ್ಛತೆ, ರಸ್ತೆ ಬದಿಗಳಲ್ಲಿನ ತ್ಯಾಜ್ಯ, ಅನುಪಯುಕ್ತ ವಸ್ತುಗಳ ತೆರವು ಕಾರ್ಯವನ್ನು ನಿರಂತರವಾಗಿ ನಡೆಸಲಾಗುತ್ತಿದೆ ಎಂದರು.

ADVERTISEMENT

ಚಾಮರಾಜಪೇಟೆ ವಿಭಾಗದಿಂದ ವಾರ್ಡ್ 138 ವ್ಯಾಪ್ತಿಯ ಕೆ.ಆರ್. ಮಾರುಕಟ್ಟೆ ಸುತ್ತಮುತ್ತಲಿನ ಸ್ಥಳಗಳು, ಮೈಸೂರು ರಸ್ತೆಯಲ್ಲಿ ಭಾನುವಾರ ಸಾಮೂಹಿಕ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.

ಶಿವಾಜಿನಗರ ವಿಭಾಗದಿಂದ ರೆಸಿಡೆನ್ಸಿ ರಸ್ತೆ, ಎಂ.ಜಿ. ರಸ್ತೆ, ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಾಮೂಹಿಕ ಸ್ವಚ್ಛತೆ ನಡೆಸಲಾಗಿದೆ.

ಪಾದಚಾರಿ ಮಾರ್ಗ ದುರಸ್ಥಿ: ಎಂ.ಜಿ. ರಸ್ತೆ ಮತ್ತು ರೆಸಿಡೆನ್ಸಿ ರಸ್ತೆಗಳಲ್ಲಿ ಹಾಳಾಗಿದ್ದ ಪಾದಚಾರಿ ಮರ್ಗಗಳನ್ನು ದುರಸ್ತಿಗೊಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಲಾಗಿದೆ.

ಇಂದು ರಸ್ತೆ ಗುಂಡಿ ಮುಚ್ಚಿದ ಪ್ರದೇಶಗಳು: ರಿಚ್ಮಂಡ್ ರಸ್ತೆ, ಸುರಂಜನ್ ದಾಸ್ ರಸ್ತೆ, ಓಲ್ಡ್ ಮದ್ರಾಸ್ ರಸ್ತೆ, ಕಾಮರಾಜ್ ರಸ್ತೆ, ಜನರಲ್ ಕೆ.ಎಸ್. ತಿಮ್ಮಯ್ಯ ರಸ್ತೆ, ವಿಕ್ಟೋರಿಯಾ ರಸ್ತೆ, ಅರಮನೆ ರಸ್ತೆ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚುವ ಮತ್ತು ಪ್ಯಾಚ್ ವರ್ಕ್ ಕಾಮಗಾರಿ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.