ADVERTISEMENT

ಉಡುಗೊರೆ ನೆಪದಲ್ಲಿ ವಂಚನೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2022, 19:46 IST
Last Updated 5 ಜನವರಿ 2022, 19:46 IST

ಬೆಂಗಳೂರು: ಕಾರು ಉಡುಗೊರೆ ನೆಪದಲ್ಲಿವ್ಯಕ್ತಿಯೊಬ್ಬರಿಗೆ ₹85 ಸಾವಿರ ವಂಚಿಸಿರುವ ಸಂಬಂಧ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.

‘ಕಮಲಾನಗರದ ನಿವಾಸಿ ಸುರೇಶ್ ವಂಚನೆಗೊಳಗಾದವರು. ಕಾರು ಉಡುಗೊರೆಯಾಗಿ ಬಂದಿದೆ ಎಂದು ವಂಚಕರು ಉಡುಗೊರೆ ಚೀಟಿಯೊಂದನ್ನುಸುರೇಶ್‌ಗೆ ಕಳಿಸಿದ್ದರು. ಈ ಬಗ್ಗೆ ಸುರೇಶ್ ವಿಚಾರಿಸಿದಾಗ ಹರ್ಬಲ್ ಲೈಫ್ ಸಂಸ್ಥೆಯ ವಾರ್ಷಿಕೋತ್ಸವದ ಅಂಗವಾಗಿ ಉಡುಗೊರೆ ನೀಡುತ್ತಿರುವುದಾಗಿ ಹೇಳಿದ್ದರು. ಸಂಸ್ಥೆಯ ಅಧಿಕಾರಿಗಳ ಹೆಸರುಗಳನ್ನು ಉಲ್ಲೇಖಿಸಿ ಮಾತನಾಡಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಉಡುಗೊರೆ ಪಡೆಯಲು ತೆರಿಗೆ ಕಟ್ಟಬೇಕು ಎಂದು ವಂಚಕರು ಹೇಳಿದ್ದರು. ಇದಕ್ಕಾಗಿ ತೆರಿಗೆ ಪತ್ರವೊಂದನ್ನು ಕಳುಹಿಸಿದ್ದರು. ಇದನ್ನು ನಂಬಿದ್ದ ಸುರೇಶ್ ಅವರಿಂದ ವಿವಿಧ ಬ್ಯಾಂಕ್‌ ಖಾತೆಗಳಿಗೆವಂಚಕರು ಹಣ ಹಾಕಿಸಿಕೊಂಡಿದ್ದರು. ಮೊದಲಿಗೆ ₹8 ಸಾವಿರ, ನಂತರ ₹15 ಸಾವಿರ ಸೇರಿದಂತೆ ಹಂತ ಹಂತವಾಗಿ ₹85 ಸಾವಿರ ಹಣವನ್ನು ಸುರೇಶ್‌ ನೀಡಿದ್ದರು’.

ADVERTISEMENT

‘ವಂಚನೆಗೆ ಒಳಗಾಗಿರುವುದು ತಿಳಿದ ನಂತರ ಸುರೇಶ್‌ ದೂರು ನೀಡಿದರು. ವಂಚಕರು ಆದಾಯ ತೆರಿಗೆ ಇಲಾಖೆ ಹೆಸರಿನಲ್ಲಿ ಹಣ ಪಡೆದು, ವಂಚಿಸಿರುವು‌ದಾಗಿ ತಿಳಿದುಬಂದಿದೆ. ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.