
ಬೆಂಗಳೂರು: ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿಯಿಂದ ಇದೇ 5ರಂದು ಚಂದ್ರಾ ಲೇಔಟ್‌ನ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ‘ಶ್ರೀ ಮಣಿಕಲ್ಲು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ.
ಹಿಮ್ಮೇಳದಲ್ಲಿ ಭಾಗವತರಾಗಿ ಸುಧೀರ್ ಭಟ್ ಪೆರ್ಡೂರು, ಪ್ರಭಾಕರ್ ಹೆಗಡೆ ಸಾಣ್ಮನೆ, ಸುಬ್ರಹ್ಮಣ್ಯ ಹೆಗಡೆ ಮೂರೂರು (ಮದ್ದಳೆ), ಗುರುದತ್ತ ಪಡಿಯಾರ್ (ಚಂಡೆ), ಮುಮ್ಮೇಳದಲ್ಲಿ ಮಾರುತಿ ನಾಯ್ಕ ಚಿಕ್ಕನಕೋಡು, ಶ್ರೀಕಾಂತ್ ಪೂಜಾರಿ ರಟ್ಟಾಡಿ, ಯೋಗೀಶ್ ಪೂಜಾರಿ ನೇರಳಕಟ್ಟೆ, ಪ್ರವೀಣ್ ಬಿ. ಸ್ತ್ರೀ ವೇಷ ಧರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಬೆಂಗಳೂರು: ನಾಲ್ಕನೇ ಆವೃತ್ತಿಯ ನಾಡ ಸಂಭ್ರಮದ ಅಂಗವಾಗಿ ನಡತೂರ್ ಫೌಂಡೇಷನ್ ವತಿಯಿಂದ ಇದೇ 6ರಂದು ಎನ್ಎಂಕೆಆರ್‌ವಿ ಆವರಣದ ಮಂಡಲ ಮಂಟಪದಲ್ಲಿ ತ್ರಿಚೂರ್ ಸಹೋದರರಾದ ಟಿ.ಎಸ್. ಶ್ರೀಕೃಷ್ಣ ಮೋಹನ್ ಹಾಗೂ ಟಿ.ಎಸ್. ರಾಮ್‌ಕುಮಾರ್ ಅವರು ಭಾರತೀಯ ಶಾಸ್ತ್ರೀಯ ಸಂಗೀತ ಕಛೇರಿ ಪ್ರಸ್ತುತ ಪಡಿಸಲಿದ್ದಾರೆ.
ಡಿ. 6ರಂದು ಸಂಜೆ 6.30ಕ್ಕೆ ಸಂಗೀತ ಕಛೇರಿ ನಡೆಯಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಎಂದು ಪ್ರಕಟಣೆ ತಿಳಿಸಿದೆ.
ಮಾಹಿತಿಗೆ: 97400 02383.
ಬೆಂಗಳೂರು: ನಿರುಪಮಾ ರಾಜೇಂದ್ರ ಮತ್ತು ಟಿ.ಡಿ. ರಾಜೇಂದ್ರ ಅವರ ನೇತೃತ್ವದಲ್ಲಿ ಇದೇ 6 ಮತ್ತು 7ರಂದು ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಡಾ. ಪ್ರೇಮಚಂದ್ರ ಸಾಗರ್ ಕಲಾಕ್ಷೇತ್ರದಲ್ಲಿ 500ಕ್ಕೂ ಹೆಚ್ಚು ಕಲಾವಿದರಿಂದ ‘ಡಾನ್ಸ್ ಕರ್ಮಾ–2025’ ಭವ್ಯ ನೃತ್ಯೋತ್ಸವ ಪ್ರದರ್ಶನ ನಡೆಯಲಿದೆ.
ಈ ನೃತ್ಯೋತ್ಸವದಲ್ಲಿ ಪಾಲ್ಗೊಳ್ಳುವ ಕಲಾವಿದರು ಕಥಕ್ ಮತ್ತು ಭರತನಾಟ್ಯ ಪ್ರದರ್ಶನ ನೀಡಲಿದ್ದಾರೆ. ಇದರ ಜೊತೆಗೆ ವಿವಿಧ ವೇಷಭೂಷಣಗಳು, ಮನಸೂರೆಗೊಳ್ಳುವ ನೃತ್ಯ ಸಂಯೋಜನೆ ಹಾಗೂ ಅದ್ಭುತ ಬೆಳಕು ವಿನ್ಯಾಸ ಒಳಗೊಂಡಿದೆ. ಪ್ರದರ್ಶನವು ಬೆಳಿಗ್ಗೆ 10ರಿಂದ ಮಧ್ಯಾಹ್ನ 12 ಹಾಗೂ ಸಂಜೆ 5.30ರಿಂದ ರಾತ್ರಿ 8ರ ವರೆಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಬೆಂಗಳೂರು: ವಿಶ್ವಪಥ ಕಲಾ ಸಂಗಮ ಹವ್ಯಾಸಿ ರಂಗ ತಂಡದಿಂದ ಡಿ. 7ರಂದು ಎನ್.ಆರ್. ಕಾಲೊನಿಯಲ್ಲಿರುವ ಡಾ.ಸಿ. ಅಶ್ವತ್ ಕಲಾಭವನದಲ್ಲಿ ಸಂಜೆ 5 ಮತ್ತು 7ಕ್ಕೆ ‘ಮುದ್ದಣ್ಣನ ಪ್ರಮೋಷನ್ ಪ್ರಸಂಗ’ ನಾಟಕ ಪ್ರದರ್ಶನ ನಡೆಯಲಿದೆ. ಈ ನಾಟಕವನ್ನು ರಾಜೇಂದ್ರ ಕಾರಂತ ರಚಿಸಿದ್ದು, ಅಶೋಕ್ ಬಿ. ಅವರು ನಿರ್ದೇಶಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.