ಯಕ್ಷಗಾನ ವೇಷ
‘ನಮನ್’ ಕಥಕ್ ಪ್ರದರ್ಶನ ನಾಳೆ
ಬೆಂಗಳೂರು: ಕೃಷ್ಣ ಪ್ರದರ್ಶನ ಕಲಾ ಅಕಾಡೆಮಿ ವತಿಯಿಂದ ‘ನಮನ್’ ಕಥಕ್ ಪ್ರದರ್ಶನವನ್ನು ಸೆ.19ರಂದು ಸಂಜೆ 6ಕ್ಕೆ ಮಲ್ಲೇಶ್ವರದ 14ನೇ ಅಡ್ಡರಸ್ತೆಯಲ್ಲಿರುವ ಸೇವಾ ಸದನದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಂಪದ ಪಿಳ್ಳೈ, ಶರತ್ ಆರ್. ಪ್ರಭಾತ್, ಸುರಶ್ರೀ ಭಟ್ಟಾಚಾರ್ಯ ಆಹ್ವಾನಿತ ಕಲಾವಿದರಾಗಿ ಪಾಲ್ಗೊಳ್ಳಲಿದ್ದಾರೆ. ಪ್ರತಿಮಾ ಆಚಾರ್ಯ ಅವರ ಗಾಯನ, ಬಿಸ್ವಜಿತ್ ಪೌಲ್ ಅವರ ತಬಲಾ, ಸುಬ್ರಹ್ಮಣ್ಯ ಹೆಗಡೆಯವರಿಂದ ಸಿತಾರ್ ವಾದನ ಇರಲಿದೆ.
ಐಸಿಸಿಆರ್ ವಲಯ ನಿರ್ದೇಶಕ ಪ್ರದೀಪ್ ಕುಮಾರ್, ಆರ್ಟಿಕ್ಯುಲೇಟ್ ಟ್ರಸ್ಟ್‌ನ ಸಂಸ್ಥಾಪಕ ಮೈಸೂರು ಬಿ. ನಾಗರಾಜ್ ಅತಿಥಿಗಳಾಗಿ ಭಾಗವಹಿಸುವರು.
ಸಂಪರ್ಕಕ್ಕೆ: 9880207237
________________
‘ದಿ ರೈಸಿಂಗ್ ಆಫ್ ಡೆತ್’ ಪ್ರದರ್ಶನ ನಾಳೆ
ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಆದಿಶಕ್ತಿ ರಂಗ ಕಲಾಸಂಸ್ಥೆ ವತಿಯಿಂದ ಸಾಧಕರಿಗೆ ಸನ್ಮಾನ ಹಾಗೂ ನಾಟಕ ಪ್ರದರ್ಶನವನ್ನು ಜೆ.ಸಿ. ರಸ್ತೆಯ ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ವಿಲಿಯಂ ಶೇಕ್ಸ್‌ಪಿಯರ್ ಅವರ ನಾಲ್ಕು ದುರಂತ ನಾಟಕಗಳ ಕಥಾ ಸಂಗಮ ‘ದಿ ರೈಸಿಂಗ್ ಆಫ್ ಡೆತ್’ ಪ್ರದರ್ಶನಗೊಳ್ಳಲಿದೆ.
________________
6 ಟು 6 ಯಕ್ಷಗಾನ ಮಹೋತ್ಸವ 20ಕ್ಕೆ
ಬೆಂಗಳೂರು: ರೀಗಲ್ ಜ್ಯುವೆಲ್ಲರ್ ಪ್ರಸ್ತುತಿಯಲ್ಲಿ ನಾಗರಾಜ್ ಶೆಟ್ಟಿ ನೈಕಂಬ್ಳಿ ಸಂಯೋಜನೆಯ ಯಕ್ಷಸಂಕ್ರಾಂತಿ ‘6 ಟು 6 ಯಕ್ಷಗಾನ’ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸೆ.20 ರಂದು ಸಂಜೆ 6ರಿಂದ ಮರುದಿನ ಬೆಳಿಗ್ಗೆ 6ರವರೆಗೆ ಹಮ್ಮಿಕೊಳ್ಳಲಾಗಿದೆ.
ತೆಂಕು–ಬಡಗಿನ ಕಲಾವಿದರ ಸಮಾಗಮದ ಈ ಮಹೋತ್ಸವದಲ್ಲಿ ರಾಮ ನಿರ್ಯಾಣ, ಗಿರಿಪೂಜೆ, ಕಾಲಯವನ ಹಾಗೂ ಚಿತ್ರಸೇನ ಎಂಬ ನಾಲ್ಕು ಪ್ರಸಂಗಗಳು ಪ್ರಸ್ತುತಿಗೊಳ್ಳಲಿವೆ.
ಸಂಪರ್ಕಕ್ಕೆ: 97414 74255
________________
‘ಚೌಕಟ್ಟಿನಾಚೆಯ ಚಿತ್ರ’ 20ಕ್ಕೆ
ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯ ತಿಂಗಳ ನಾಟಕ ಸಂಭ್ರಮದಲ್ಲಿ ಮುಂಬೈನ ಕನ್ನಡ ಕಲಾ ಕೇಂದ್ರದ ಕಲಾವಿದರಿಂದ ‘ಚೌಕಟ್ಟಿನಾಚೆಯ ಚಿತ್ರ’ ನಾಟಕ ಪ್ರದರ್ಶನ ಸೆ.20ರಂದು ಸಂಜೆ 6.30ಕ್ಕೆ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ನಡೆಯಲಿದೆ.
ಲಿಂಗತ್ವ ಅಲ್ಪಸಂಖ್ಯಾತರ ಕುರಿತ ವಿಭಿನ್ನ ರೀತಿಯ ನಾಟಕ ಇದಾಗಿದ್ದು, ವಿದ್ದು ಉಚ್ಚಿಲ್ ರಂಗ ವಿನ್ಯಾಸ ಮಾಡಿದ್ದಾರೆ. ದಿವಾಕರ ಕಟೀಲ್ ಸಂಗೀತ ನೀಡಿದ್ದಾರೆ. ರಂಗ ಸಂಘಟಕ ವಿ.ಎಂ. ನಾಗೇಶ್ ತಿಂಗಳ ಅತಿಥಿಯಾಗಿರುವರು. ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಅಧ್ಯಕ್ಷತೆ ವಹಿಸುವರು ಎಂದು ಕಾರ್ಯಕ್ರಮದ ಸಂಚಾಲಕರಾದ ಜಿಪಿಒ ಚಂದ್ರು ಮತ್ತು ಜಗದೀಶ್ ಜಾಲ ತಿಳಿಸಿದ್ದಾರೆ.
________________
‘ಕಚ ದೇವಯಾನಿ’ 21ಕ್ಕೆ
ಬೆಂಗಳೂರು: ನಿರ್ಮಾಣ್ ಯಕ್ಷ ಬಳಗದಿಂದ ತಿಂಗಳ ತಿರುಳು ಸರಣಿಯ 35ನೇ ತಾಳಮದ್ದಳೆ ‘ಕಚ ದೇವಯಾನಿ’ ಸೆ.21ರಂದು ಮಧ್ಯಾಹ್ನ 3ಕ್ಕೆ ಗಿರಿನಗರ ಶ್ರೀರಾಮಾಶ್ರಮದಲ್ಲಿ ನಡೆಯಲಿದೆ.
ಅರ್ಥಧಾರಿ ಜಬ್ಬಾರ್ ಸಮೊ ಅವರು ಬೆಂಗಳೂರಿನ ಹವ್ಯಾಸಿ ಕಲಾವಿದರೊಂದಿಗೆ ಭಾಗವಹಿಸಲಿದ್ದಾರೆ. ಶುಕ್ರಾಚಾರ್ಯನಾಗಿ ಅರ್ಥ ಹೇಳಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.