ADVERTISEMENT

ರಸ್ತೆ ಕಾಮಗಾರಿಗೆ ತಿಂಗಳ ಗಡುವು: ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್‌. ರಮೇಶ್‌

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 18:03 IST
Last Updated 14 ಜನವರಿ 2026, 18:03 IST
<div class="paragraphs"><p>ಸ್ತೆ ನಿರ್ಮಾಣ ಕಾಮಗಾರಿ</p></div>

ಸ್ತೆ ನಿರ್ಮಾಣ ಕಾಮಗಾರಿ

   

ಬೆಂಗಳೂರು: ಪೂರ್ವ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ₹694 ಕೋಟಿ ವೆಚ್ಚದ ಪ್ಯಾಕೇಜ್‌ನಲ್ಲಿ ನಡೆಯುತ್ತಿರುವ ಎಲ್ಲ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಒಂದು ತಿಂಗಳಲ್ಲಿ ಪೂರ್ಣಗೊಳಿಸಬೇಕುಎಂದು ಆಯುಕ್ತ ಡಿ.ಎಸ್‌. ರಮೇಶ್‌ ಸೂಚಿಸಿದರು.

ಪೂರ್ವ ನಗರ ಪಾಲಿಕೆಯ ವ್ಯಾಪ್ತಿಯ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಬುಧವಾರ ಪರಿಶೀಲಿಸಿ ಅವರು ಮಾತನಾಡಿದರು.

ADVERTISEMENT

ಹೊರಮಾವು -ಅಗರ ಮುಖ್ಯರಸ್ತೆ, ಹೊರಮಾವು-ಕಲ್ಕೆರೆಮುಖ್ಯರಸ್ತೆ, ರಾಮಮೂರ್ತಿನಗರ- ಕಲ್ಕೆರೆ ಮುಖ್ಯರಸ್ತೆ, ಕಲ್ಕೆರೆ- ಚನ್ನಸಂದ್ರ ಮುಖ್ಯರಸ್ತೆ, ವಡ್ಡರಪಾಳ್ಯ ಮುಖ್ಯರಸ್ತೆ ಹಾಗೂ ಇನ್ನುಳಿದ ವಿವಿಧ ರಸ್ತೆ ಅಭಿವೃದ್ಧಿ

ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ಒಂದು ತಿಂಗಳೊಳಗಾಗಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚಿಸಿದರು.

ವಡ್ಡರಪಾಳ್ಯ ಮುಖ್ಯ ರಸ್ತೆಯಲ್ಲಿ ಬೆಂಗಳೂರು ಜಲಮಂಡಳಿ ಕೈಗೊಂಡಿರುವ ಒಳಚರಂಡಿ ಕೊಳವೆ ಮಾರ್ಗ ಅಳವಡಿಕೆ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ. ಜಲಮಂಡಳಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಕಾಮಗಾರಿಯನ್ನು ಮುಗಿಸಬೇಕು. ಅದಾದ ನಂತರ ತಕ್ಷಣವೇ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಾರಂಭಿಸಬೇಕು ಎಂದರು.

ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಕಸ್ತೂರಿನಗರದಲ್ಲಿ ಕೆಂಪೇಗೌಡ ಕೆಳಸೇತುವೆಯಿಂದ-ಬೆನ್ನಿಗಾನಹಳ್ಳಿ ಕೆರೆವರೆಗೂ ನಡೆಯುತ್ತಿರುವ ಬೃಹತ್ ಮಳೆ ನೀರು ಕಾಲುವೆ ತಡೆಗೋಡೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ನವೀಕರಣಕ್ಕೆ ದಾಖಲೆ: ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ವಾಣಿಜ್ಯ ಸಂಕೀರ್ಣಗಳಲ್ಲಿರುವ ಮಳಿಗೆದಾರರು ಗುತ್ತಿಗೆ ನವೀಕರಿಸಲು ದಾಖಲೆ ಸಲ್ಲಿಸಲು ಸೂಚಿಸಲಾಗಿದೆ.

ಜಯನಗರ ನಾಲ್ಕನೇ ಬಡಾವಣೆ ಯಲ್ಲಿರುವ ಜಯನಗರ ವಾಣಿಜ್ಯ ಸಂಕೀರ್ಣ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ವಾಣಿಜ್ಯ ಸಂಕೀರ್ಣದಲ್ಲಿನ 251 ಮಳಿಗೆಗಳು ಮತ್ತು ಜಯನಗರ 4ನೇ ‘ಟಿ’ ಬ್ಲಾಕ್‌ನ ಮಾರುಕಟ್ಟೆ ಕಟ್ಟಡದಲ್ಲಿನ 39 ಮಳಿಗೆಗಳ ನವೀಕರಣದ ಅವಧಿಯು ಮುಕ್ತಾಯಗೊಂಡಿದೆ. ಸರ್ಕಾರದ ಹೊಸ ಅಧಿಸೂಚನೆಯಂತೆ ಮಳಿಗೆಗಳ ಗುತ್ತಿಗೆಯನ್ನು ಇನ್ನೊಂದು ಅವಧಿಗೆ ನವೀಕರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಆಯುಕ್ತ ಕೆ.ಎನ್‌. ರಮೇಶ್‌ ತಿಳಿಸಿದರು.

2024ರಲ್ಲಿ ಗುತ್ತಿಗೆ ಅವಧಿ ಮುಕ್ತಾಯಗೊಂಡಿದ್ದರೂ ಬಾಡಿಗೆ/ ಗುತ್ತಿಗೆ ನವೀಕರಣಕ್ಕೆ ಅವಕಾಶವನ್ನು ಕೆಲವರು ಬಳಸಿಕೊಂಡಿಲ್ಲ. ಈ ಮಳಿಗೆಗಳ ಮಾಲೀಕರು ಸೂಚನಾ ಪತ್ರದಲ್ಲಿ ತಿಳಿಸಿರುವಂತೆ ದಾಖಲೆಗಳನ್ನು ಸಲ್ಲಿಸಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.