ADVERTISEMENT

ಆಹಾರ ಪದಾರ್ಥಗಳಲ್ಲಿ ನೈಸರ್ಗಿಕ ಬಣ್ಣ ಬಳಕೆ: ಎನ್‌ಕೆಪಿ ಎಂಪೈರ್ ವೆಂಚರ್ಸ್

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 12:42 IST
Last Updated 6 ಆಗಸ್ಟ್ 2025, 12:42 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ‘ಆಹಾರ ಪದಾರ್ಥಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ,  ನೈಸರ್ಗಿಕ ಬಣ್ಣ ಬಳಕೆಗೆ ಆದ್ಯತೆ ನೀಡಿದ್ದೇವೆ’ ಎಂದು ಎನ್‌ಕೆಪಿ ಎಂಪೈರ್ ವೆಂಚರ್ಸ್ ತಿಳಿಸಿದೆ.

ಇತ್ತೀಚೆಗೆ ಎಂಪೈರ್‌ ರೆಸ್ಟೋರೆಂಟ್‌ನ ಚಿಕನ್ ಕಬಾಬ್ ಮಾದರಿ ಸಂಗ್ರಹಿಸಿದ್ದ ಆಹಾರ ಸುರಕ್ಷತಾ ಅಧಿಕಾರಿಗಳು, ಆ ಮಾದರಿಗಳ್ನು ರಾಜ್ಯ ಆಹಾರ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದ್ದರು. ಅಸುರಕ್ಷಿತ ಬಣ್ಣ ಬಳಕೆಗೆ ಸಂಬಂಧಿಸಿದಂತೆ ನೋಟಿಸ್ ನೀಡಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ರೆಸ್ಟೋರೆಂಟ್ ವ್ಯವಸ್ಥಾಪಕರು, ‘ನಾವು ಬಳಕೆ ಮಾಡುತ್ತಿದ್ದ ಕೃತಕ ಬಣ್ಣವು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಮಾನ್ಯತೆ ಹೊಂದಿತ್ತು. ಆದರೂ ನೀಡಲಾದ ಸೂಚನೆ ಅನುಸಾರ ಆ ಬಣ್ಣ ಬಳಕೆಯನ್ನು ಸ್ಥಗಿತಗೊಳಿಸಿದ್ದೇವೆ. ಈಗ ನೈಸರ್ಗಿಕ ಬಣ್ಣವನ್ನು ಮಾತ್ರ ಬಳಸುತ್ತಿದ್ದೇವೆ’ ಎಂದು ಹೇಳಿದ್ದಾರೆ.

ADVERTISEMENT

‘ಗ್ರಾಹಕರು ವದಂತಿಗಳಿಗೆ ಕಿವಿಗೊಡಬಾರದು. ಆರು ದಶಕಗಳಿಂದ ಗುಣಮಟ್ಟದ ಮತ್ತು ರುಚಿಯಾದ ಆಹಾರ ಪದಾರ್ಥಗಳನ್ನು ಒದಗಿಸುತ್ತಿದ್ದೇವೆ’ ಎಂದು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.